ವಿಟಿಯು ರಾಜ್ಯ ಮಟ್ಟದ ಕ್ರೀಡಾಕೂಟ: ಎಸ್‌ಜೆಇಸಿಗೆ ಪ್ರಶಸ್ತಿ

ಮಂಗಳೂರು, ಮಾ.19: ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ (ಎಸ್‌ಜೆಇಸಿ) ಮಹಿಳಾ ಅಥ್ಲೆಟಿಕ್ಸ್ ತಂಡವು ಮಾ.15 ರಿಂದ 18ರವರೆಗೆ ಶಿವಮೊಗ್ಗದ ಜೆಎನ್‌ಎನ್‌ಸಿಇ ಆಯೋಜಿಸಿದ್ದ 26 ನೇ ವಿಟಿಯು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ದೈಹಿಕ ಶಿಕ್ಷಣ ನಿರ್ದೇಶಕಿ (ಪಿಇಡಿ) ವನೀಶಾ ವಿ ರೊಡ್ರಿಗಸ್ ಮತ್ತು ಸಹಾಯಕ ಪಿಇಡಿ ಸುಧೀರ್ ಎಂ ಮಾರ್ಗದರ್ಶನದಲ್ಲಿ ಎಸ್‌ಜೆಇ ಕಾಲೇಜಿನ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಎಂಸಿಎ ಪ್ರಥಮ ವರ್ಷದ ಪ್ರಣಮ್ಯ ಶೆಟ್ಟಿ ಜಾವೆಲಿನ್ ಥ್ರೋನಲ್ಲಿ ಪ್ರಥಮ ಸ್ಥಾನ ಪಡೆದರು, ಸಿಎಸ್‌ಇ ಪ್ರಥಮ ವರ್ಷದ ಅನಘಾ ಕೆ.ಎ, 400 ಮೀಟರ್ ಹರ್ಡಲ್ಸ್‌ನಲ್ಲಿ ಪ್ರಥಮ , ಇಸಿಇ ಪ್ರಥಮ ವರ್ಷದ, ತನ್ವಿ ಎಸ್, 800 ಮೀ. ಓಟದಲ್ಲಿ ತೃತೀಯ, ಇಸಿಇ ದ್ವಿತೀಯ ವರ್ಷದ, ಕುಶಿ ಸಾಲಿಯನ್ ಹ್ಯಾಮರ್ ಥ್ರೋನಲ್ಲಿ (36.71 ಮೀ) ಹೊಸ ಕೂಟ ದಾಖಲೆಯೊಂದಿಗೆ ಪ್ರಥಮ ಸ್ಥಾನ ಪಡೆದರು ಮತ್ತು ಇಸಿಇ ತೃತೀಯ ವರ್ಷದ ಸುಶ್ರಿತಾ 200 ಮೀಟರ್‌ನಲ್ಲಿ ಮೂರನೇ ಸ್ಥಾನ ಪಡೆದರು.
Next Story