ಯುವಕ ನಾಪತ್ತೆ

ಮಂಗಳೂರು, ಮಾ.21: ಬೆಳಗಾವಿ ಮೂಲದ ಲಾರಿ ಕ್ಲೀನರ್ ವೃತ್ತಿ ಮಾಡಿಕೊಂಡಿದ್ದ ಶುಭಂ ಶಹಪೂರಕರ (30) ಎಂಬವರು ಕಾಣೆಯಾದ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎನ್‌ಎಂಪಿಎ ಕೆಕೆ ಗೇಟ್ ಪಾಕಿರ್ಂಗ್ ಬಳಿ ನಿಲ್ಲಿಸಿದ್ದ ಲಾರಿಯಿಂದ ಇಳಿದು ಹೋದವರು ಮನೆಗೂ ತೆರಳದೆ ಕಾಣೆಯಾಗಿದ್ದಾರೆ. 5.2 ಅಡಿ ಎತ್ತರದ, ಎಣ್ಣೆಕಪ್ಪುಮೈಬಣ್ಣದ, ಸಾಧಾರಣ ಮೈಕಟ್ಟಿನ ಇವರ ಬಲ ಕಿವಿ ಯಲ್ಲಿ ಟಿಕ್ಕಿ ಇರುತ್ತದೆ. ಹಿಂದಿ, ಮರಾಠಿ ಭಾಷೆ ಮಾತನಾಡುತ್ತಾರೆ ಎಂದು ಪಣಂಬೂರು ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.
Next Story