ಮಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿ ಸೆರೆ

ಮಂಗಳೂರು, ಮಾ.22: ನಗರದ ಕೆಪಿಟಿ ಬಳಿಯಲ್ಲಿರುವ ಆರ್ಟಿಒ ತಪಾಸಣಾ ಕೇಂದ್ರದ ಬಳಿ ನಿಷೇಧಿತ ಮಾದಕ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಆರೋಪಿಯೊಬ್ಬನನ್ನು ಕದ್ರಿ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ನಗರದ ನಿವಾಸಿ ಅಝರುದ್ದೀನ್ (35) ಪ್ರಕರಣದ ಆರೋಪಿ.
ಕದ್ರಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಕೆಪಿಟಿ ಬಳಿಯಲ್ಲಿರುವ ತಪಾಸಣಾ ಕೇಂದ್ರ ಬಳಿ ನಿಷೇಧಿತ ಮಾದಕ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯಿಂದ 9 ಗ್ರಾಂ ಎಂಡಿಎಂಎ, 210ಗ್ರಾಂ ಗಾಂಜಾ ವಶಪಡಿಸಿಕೊಳ್ಳ ಲಾಗಿದೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story