ಡಿಕೆಎಸ್‌ಸಿ ದುಬೈ ರಾಷ್ಟ್ರೀಯ ಸಮಿತಿಯಿಂದ ಇಫ್ತಾರ್ ಕೂಟ

ದುಬೈ: ಡಿಕೆಎಸ್‌ಸಿ ದುಬೈ ರಾಷ್ಟ್ರೀಯ ಸಮಿತಿಯ ವತಿಯಿಂದ ಬೃಹತ್ ಇಫ್ತಾರ್ ಕೂಟವು ರಷೀದಿಯ ದಲ್ಲಿ ರವಿವಾರ ನಡೆಯಿತು.
ಈ ಕಾರ್ಯಕ್ರಮವನ್ನು ಡಿಕೆಎಸ್‌ಸಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಎಂ.ಇ. ಮೂಳೂರು ಉದ್ಘಾಟಿಸಿದರು. ಸಯ್ಯದ್ ಅಶ್ರಫ್ ತಂಙಳ್ ಆದೂರು ದುವಾ ನೆರವೇರಿಸಿದರು.
ಇದೇ ಸಂದರ್ಭ ಸಯ್ಯದ್ ತ್ವಾಹಾ ಬಾಫಕಿ ತಂಙಳ್ ಅವರ ನೇತೃತ್ವದಲ್ಲಿ ಜಲಾಲಿಯ ಮಜ್ಲಿಸ್ ನಡೆ ಯಿತು. ಸಮಾರಂಭದಲ್ಲಿ ಸಲ್ಮಾನ್ ಅಝ್ಹರಿ ಕಲಿರಾಯಿ ಹಾಗೂ ಸಯೀದ್ ಅಬ್ದುಲ್ ಕರೀಂ ನೂರಾಣಿ ಅವರು ಮುಖ್ಯ ಪ್ರಭಾಷಣಗೈದರು.
ಸಮಾರಂಭದ ವೇದಿಕೆಯಲ್ಲಿ ಡಿಕೆಎಸ್‌ಸಿಯ ಇಕ್ಬಾಲ್ ಕಣ್ಣಂಗಾರ್, ಡಾ. ಕಾಪು ಮುಹಮ್ಮದ್, ಮುಹಮ್ಮದ್ ಅಲಿ ಮೂಡುತೋಟ ಹಳೆಯಂಗಡಿ, ಯೂಸುಫ್ ಅರ್ಲಪದವು, ಶಂಸುದ್ದೀನ್, ಅನ್ಸಾರಿ ಸುರತ್ಕಲ್ ಮೊದಲಾದವರು ಉಪಸ್ಥಿತರಿದ್ದರು. ಯೂಸುಫ್ ಅರ್ಲಪದವು ಕಾರ್ಯಕ್ರಮ ನಿರೂಪಿಸಿದರು. ಸುಲೈಮಾನ್ ಮೂಳೂರು ವಂದನಾರ್ಪಣೆ ಗೈದರು.
Next Story