ಕಡಬ: ಊಟ ಮಾಡಿ ಮಲಗಿದ್ದ ಎರಡೂವರೆ ವರ್ಷದ ಮಗು ಮೃತ್ಯು

ಕಡಬ, ಮಾ.25. ಊಟ ಮಾಡಿ ಮಲಗಿದ್ದ ಎರಡೂವರೆ ವರ್ಷದ ಮಗುವೊಂದು ಮೃತಪಟ್ಟ ಘಟನೆ ಕಡಬ ತಾಲೂಕಿನ ಕೊಣಾಜೆ ಗ್ರಾಮದ ಮಾಲ ಎಂಬಲ್ಲಿ ಮಂಗಳವಾರ ನಡೆದಿದೆ.
ಮೃತ ಮಗುವನ್ನು ಕೊಣಾಜೆ ಮಾಲ ನಿವಾಸಿ ಲಿಂಡೋರಾಜ್ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿ ರುವ ಉತ್ತರ ಪ್ರದೇಶ ಮೂಲದ ರಾಜಾ ಸಿಂಗ್ ಮತ್ತು ದಿವ್ಯಾಂಶಿ ಸಿಂಗ್ ದಂಪತಿಯ ಎರಡೂವರೆ ವರ್ಷದ ಪುತ್ರ ರುದ್ರ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿದೆ.
ಮಂಗಳವಾರ ಮಧ್ಯಾಹ್ನ ಊಟ ಮಾಡಿ ಮಲಗಿದ್ದ ಮಗುವನ್ನು ಎಬ್ಬಿಸಲೆಂದು ನೋಡುವಾಗ ಏಳದೇ ಇದ್ದುದರಿಂದ ತಕ್ಷಣವೇ ಕಡಬದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದ ವೇಳೆ ಮಗು ಮೃತಪಟ್ಟಿರು ವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಮಗು ಆಹಾರ ಸಿಲುಕಿಕೊಂಡು ಅಥವಾ ಯಾವುದೋ ಖಾಯಿಲೆ ಉಲ್ಬಣಗೊಂಡು ಮೃತಪಟ್ಟಿರಬಹುದಾಗಿದ್ದು, ಮಗುವಿನ ಮರಣದಲ್ಲಿ ಯಾವುದೇ ಸಂಶಯವಿಲ್ಲ ಎಂದು ತಾಯಿ ದಿವ್ಯಾಂಶಿ ಸಿಂಗ್ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story