ಮಂಗಳೂರು: ಕಳ್ಳಭಟ್ಟಿ ಸಾರಾಯಿ ಅಡ್ಡೆಗೆ ಅಬಕಾರಿ ದಾಳಿ

ಮಂಗಳೂರು, ಎ.2: ನಗರ ಹೊರ ವಲಯದ ಆಡಂಕುದ್ರು ಸರಕಾರಿ ಶಾಲಾ ಹಿಂಭಾಗದಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡುತ್ತಿರುವುದನ್ನು ಅಬಕಾರಿ ಅಧಿಕಾರಿಗಳು ಪತ್ತೆ ಹಚ್ಚಿ 5 ಲೀ. ಕಳ್ಳಭಟ್ಟಿ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ.
ಉರ್ಬನ್ ಡಿಸೋಜ ಬಂಧಿತ ಆರೋಪಿಯಾಗಿದ್ದು, ಈತ ತನ್ನ ಖಾಲಿ ಜಾಗದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡುತ್ತಿದ್ದ. ಕಳ್ಳಭಟ್ಟಿ ತಯಾರಿಗೆ ಉಪಯೋಗಿಸುತ್ತಿದ್ದ ಸಲಕರಣೆ ಗಳು, 40 ಲೀ.ನಷ್ಟು ಬೆಲ್ಲದ ಕೊಳೆ ಪತ್ತೆಯಾಗಿದೆ. ವಶಕ್ಕೆ ಪಡೆದ ಸೊತ್ತುಗಳ ಮೌಲ್ಯ 16 ಸಾವಿರ ರೂ. ಆಗಬಹುದೆಂದು ಅಂದಾಜಿಸಲಾಗಿದೆ.
ಮಂಗಳೂರು ದಕ್ಷಿಣ ವಲಯದ ಅಬಕಾರಿ ಇನ್ಸ್ಪೆಕ್ಟರ್ ಕಮಲ ಎಚ್. ಪ್ರಕರಣ ದಾಖಲಿಸಿದ್ದು, ಅಬಕಾರಿ ಉಪನಿರೀಕ್ಷಕ ಹರೀಶ್ ಪಿ., ಕಾನ್ಸ್ಟೇಬಲ್ಗಳಾದ ಬಸವರಾಜ ತೋರೆ, ಆನಂದ್, ವಾಹನ ಚಾಲಕ ರಘುರಾಮ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Next Story