ವಸತಿ ಗೃಹದಲ್ಲಿ ಬೆಂಕಿ ಆಕಸ್ಮಿಕ: ಲಕ್ಷಾಂತರ ರೂ. ನಷ್ಟ

ಮಂಗಳೂರು: ನಗರದ ಬಂದರು ಪ್ರದೇಶದಲ್ಲಿರುವ ಹೊಟೇಲ್‌ವೊಂದರ ವಸತಿ ಗೃಹದ ರೂಂಗೆ ಎಸಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ರೂ. ನಷ್ಟ ಸಂಭವಿಸಿರುವುದು ರವಿವಾರ ವರದಿಯಾಗಿದೆ.
ಬಂದರು ಪ್ರದೇಶದಲ್ಲಿರುವ ವಸತಿ ಗೃಹದ ಎರಡನೇ ಮಹಡಿಯಲ್ಲಿ ವ್ಯಕ್ತಿಯೊಬ್ಬರು ರೂಂ. ಪಡೆದಿದ್ದು, ಮಧ್ಯಾಹ್ನ ವೇಳೆ ರೂಂಗೆ ಲಾಕ್ ಮಾಡಿ ಹೊರಗೆ ಹೋಗಿದ್ದರು. ಸಂಜೆ 4: 45ರ ವೇಳೆಗೆ ರೂಂನಲ್ಲಿ ಹೊಗೆ ಕಂಡು ಬಂದಿದ್ದು, ಕೂಡಲೇ ಈ ಬಗ್ಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ರೂಂನಲ್ಲಿ ಕೀ ಬಳಸಿ ತೆರೆದು ನೋಡಿದಾಗ ರೂಮ್ ನೊಳಗಿದ್ದ ಟಿವಿ , ಫರ್ನಿಚರ್ ಸಂಪೂರ್ಣ ಸುಟ್ಟುಹೋಗಿದೆ ಎಂದು ತಿಳಿದು ಬಂದಿದೆ.
ಎ.ಸಿ. ಸಂಪರ್ಕ ಪ್ರತ್ಯೇಕವಾಗಿದ್ದು, ಇದರಿಂದ ಶಾರ್ಟ್ ಸರ್ಕ್ಯೂಟ್ ಆಗಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
Next Story