ದ್ವಿತೀಯ ಪಿಯುಸಿ ಪರೀಕ್ಷೆ: ಕಲ್ಲಡ್ಕ ಅನುಗ್ರಹ ಮಹಿಳಾ ಪದವಿ ಪೂರ್ವ ಕಾಲೇಜು ಉತ್ತಮ ಸಾಧನೆ

ಮಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಲ್ಲಡ್ಕದ ಅನುಗ್ರಹ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ.
ವಾಣಿಜ್ಯ ವಿಭಾಗದ ಅಪ್ರಾ ಬಿ.ಬಿ 578 ಮತ್ತು ನಬೀಸತ್ ಫಾತಿಮಾ 563 ಅಂಕಗಳು, ವಿಜ್ಞಾನ ವಿಭಾ ಗದ ಆಯಿಷತ್ ಸಹಲಾ 561 ಅಂಕಗಳು, ಕಲಾ ವಿಭಾಗದ ಅವ್ವಮ್ಮ ಆಫ್ರಾ 522 ಅಂಕಗಳನ್ನು ಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 67 ವಿದ್ಯಾರ್ಥಿನಿಯರ ಪೈಕಿ 26 ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 37 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಶೇ.97.01 ಫಲಿತಾಂಶ ದಾಖಲಾಗಿದೆ. ಆಶಿಯಾ ಮಿಸ್ಬಾ ಬಿ. ಇತಿಹಾಸ ಮತ್ತು ವ್ಯವಹಾರ ಅಧ್ಯಯನದಲ್ಲಿ, ಅಫ್ರಾ ಬೀಬಿ ಕನ್ನಡ ಮತ್ತು ಸಂಖ್ಯಾಶಾಸ್ತ್ರದಲ್ಲಿ, ಫಾತಿಮತ್ ಜುಮೈಲತ್, ನೆಬಿಸತ್ ಫಾತಿಮಾ ಇತಿಹಾಸದಲ್ಲಿ, ಫಾತಿಮತ್ ಶಝ, ಮಷ್ರತ್ ಮಶ್ರೂರ, ದುಲೈಕಾ ಶನವಾಝ್ ಸಂಖ್ಯಾಶಾಸ್ತ್ರದಲ್ಲಿ, ಆಶಿಕ ಶಿಯಾನ ಕನ್ನಡದಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿರುತ್ತಾರೆ.
ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 14 ವಿದ್ಯಾರ್ಥಿನಿಯರ ಪೈಕಿ ಒಬ್ಬಾಕೆ ವಿಶಿಷ್ಟ ಶ್ರೇಣಿಯಲ್ಲಿ ಮತ್ತು 8 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಶೇ.92.85 ಫಲಿತಾಂಶ ದಾಖಲಾಗಿದೆ.
ವಿಜ್ಞಾನ ವಿಭಾಗದಲ್ಲಿ ಹಾಜರಾದ 30 ವಿದ್ಯಾರ್ಥಿನಿಯರ ಪೈಕಿ 7 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 23 ಪ್ರಥಮ ಶ್ರೇಣಿಯಲ್ಲಿ ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದು, ಶೇ.100 ಫಲಿತಾಂಶ ದಾಖಲಾಗಿರು ತ್ತದೆ. ಆಯಿಷತ್ ಸಹ್ಲಾ ಜೀವಶಾಸ್ತ್ರ ವಿಭಾಗದಲ್ಲಿ 100 ಅಂಕಗಳನ್ನು ಗಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.