ಸ್ನಾತಕೋತ್ತರ ಡಿಪ್ಲೊಮಾ ಪದವಿ ಪರೀಕ್ಷೆ: ಅಕ್ಷತಾಗೆ ಚಿನ್ನದ ಪದಕ

ಮಂಗಳೂರು, ಎ.15: ಹರಿಯಾಣದ ಗುರುಗಾವ್ ಮ್ಯಾನೇಜ್ಮೆಂಟ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ ನಡೆಸಿದ 2023-25ನೆಯ ಸಾಲಿನ ಎಂಬಿಎ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪರೀಕ್ಷೆಯಲ್ಲಿ ಮಂಗಳೂರು ತಲಪಾಡಿಯ ಅಕ್ಷತಾ ಟಿ ಅತ್ಯುತ್ತಮ ವಿದ್ಯಾರ್ಥಿನಿ(ಬೆಸ್ಟ್ ಸ್ಟೂಡೆಂಟ್) ಆಗಿ ಅಧ್ಯಕ್ಷರ ಚಿನ್ನದ ಪದಕ ಪಡೆದ ಗೌರವಕ್ಕೆ ಭಾಜನರಾಗಿದ್ದಾರೆ.
ಇವರು ತಲಪಾಡಿ ಗ್ರಾಮದ ಕೃಷಿಕ,ಟಿ.ಶ್ರೀಕುಮಾರ್ ಭಟ್ ಹಾಗೂ ಸರಕಾರಿ ಬಿ.ಇಡಿ ಕಾಲೇಜು ಮಂಗಳೂರು ಇಲ್ಲಿನ ಉಪನ್ಯಾಸಕಿ ಡಾ.ಉಷಾ ಎನ್. ಭಟ್ ದಂಪತಿ ಪುತ್ರಿ.
Next Story