ಮಂಗಳೂರು: ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ಮಂಗಳೂರು: ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ವತಿಯಿಂದ 2025ನೇ ಸಾಲಿನ ಪವಿತ್ರ ಹಜ್ಜ್ ಯಾತ್ರೆ ಕೈಗೊಳ್ಳಲಿರುವ ಸಹಕಾರಿ ಸಂಘದ ನಿರ್ದೇಶಕರಿಗೆ ಬಿಳ್ಕೋಡಿಗೆ ಕಾರ್ಯಕ್ರಮ ಮಂಗಳೂರು ಬಂದರ್ ನ ಬಹರ್-ಎ-ನೂರ್ ಸಭಾಂಗಣದಲ್ಲಿ ನಡೆಯಿತು.
ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿಯಮಿತ ನಿರ್ದೇಶಕ ಟಿ.ಎಚ್. ಹಮೀದ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಬ್ದುಲ್ ಲತೀಫ್ ಡಿ, ಸದಸ್ಯ ಹನೀಫ್ ತೋಟಬೆಂಗ್ರೆ, ಫಯಾಝ್ ಉಳ್ಳಾಲ್, ಮುಹಮ್ಮದ್ ಮುಸ್ಲಿಯಾರ್ ಇರಾ ಇವರನ್ನು ಬೀಳ್ಕೊಡಲಾಯಿತು.
ಬಹರ್-ಎ- ನೂರು ಕಟ್ಟಡದ ಪೈಟಿಂಗ್ ಗುತ್ತಿಗೆದಾರ ಗಿರೀಶ್ ಕುಮಾರ್ ಕದ್ರಿ ಅವರನ್ನು ಸನ್ಮಾನಿಸಲಾಯಿತು.
ಸಂಘ ಅಧ್ಯಕ್ಷ ಜೆ. ಮುಹಮ್ಮದ್ ಇಸಾಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಬಿ.ಆಹ್ಮದ್ ಬಾವಾ, ನಿರ್ದೇಶಕರಾದ ಯು.ಟಿ.ಆಹ್ಮದ್ ಶರೀಫ್, ಬಿ.ಇಬ್ರಾಹಿಂ ಖಲೀಲ್, ಎ.ಎಮ್.ಕೆ.ಮೊಹಮ್ಮದ್ ಇಬ್ರಾಹಿಂ, ಎಸ್.ಎಮ್.ಇಬ್ರಾಹಿಂ, ಮೊಹಮ್ಮದ್ ಆಶ್ರಫ್, ಎಸ್.ಕೆ. ಇಸ್ಮಾಯಿಲ್, ಸದಸ್ಯರಾದ ಎಂ.ಎ ಗಫೂರ್, ಶಂಶುದ್ದೀನ್ ಕುದ್ರೋಳಿ, ಯು.ಎಫ್ ಇಕ್ಬಾಲ್, ಮುನೀರ್ ಎಂಎನ್ ಆರ್, ಮೊಹಮ್ಮದ್ ಎಮ್‌ಎಕ್ಸ್ ಎಮ್, ರಹಿಮಾನ್ ಸಾಗರ್, ಸಲಹೆಗಾರ ಮಯ್ಯದಿ ಕಾರ್ನಾಡ್ ಮೊದಲಾದವರು ಉಪಸ್ಥಿತರಿದ್ದರು.
ಸಲಹೆಗಾರ ಮುಸ್ತಫಾ ಹರೇಕಳ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಬ್ದುಲ್ ಲತೀಫ್ ಡಿ ವಂದಿಸಿದರು.