ಎ.1-2ರಂದು ಅಂಚೆ ಕಚೇರಿಗಳಲ್ಲಿ ಉಳಿತಾಯ ಖಾತೆ ವ್ಯವಹಾರವಿಲ್ಲ
ಸಾಂದರ್ಭಿಕ ಚಿತ್ರ (PTI)
ಮಂಗಳೂರು, ಮಾ. 30: ಅಂಚೆ ಕಚೇರಿಗಳಲ್ಲಿ 2023-24 ನೇ ಆರ್ಥಿಕ ವರ್ಷದ ವರ್ಷಾಂತ್ಯದ ಲೆಕ್ಕಾಚಾರಗಳು ಮತ್ತು ಬಡ್ಡಿ ಲೆಕ್ಕಾಚಾರಗಳು ನಡೆಯಲಿರುವುದರಿಂದ ಎ. 1ಮತ್ತು 2ರಂದು ಮಂಗಳೂರು ಅಂಚೆ ವಿಭಾಗದ ಯಾವುದೇ ಅಂಚೆ ಕಛೇರಿಗಳಲ್ಲಿ ಅಂಚೆ ಉಳಿತಾಯ ಖಾತೆಗಳಿಗೆ ಸಂಬಂಧಿಸಿದಂತೆ ವ್ಯವಹಾರಗಳು ಇರುವುದಿಲ್ಲ ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಎ. 3ರಿಂದ ಎಲ್ಲಾ ವ್ಯವಹಾರಗಳು ಎಂದಿನಂತೆ ನಡೆಯಲಿವೆ. ಅಂಚೆ ಕಚೇರಿಯ ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಇ-ಬ್ಯಾಂಕಿಂಗ್ / ಮೊಬೈಲ್ ಬ್ಯಾಂಕಿಂಗ್ / ಐಪಿಪಿಬಿ ಸ್ವೀಪ್ ಇನ್ / ಸ್ವೀಪ್ ಔಟ್ ಸೇವೆಗಳು ಲಭ್ಯವಿಲ್ಲ. ಗ್ರಾಹಕರು ಸಹಕರಿಸಬೇಕು ಎಂದು ಅಧೀಕ್ಷಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story