ಎನ್‌ಎಸ್‌ಎಸ್ ಬದುಕನ್ನು ರೂಪಿಸಲು ಶ್ರೇಷ್ಠ ಮಾರ್ಗ : ಡೊಂಬಯ್ಯ
ಮಂಗಳೂರು : ರಾಷ್ಟ್ರೀಯ ಸೇವಾ ಯೋಜನೆ ಅನೇಕ ದೂರ ಕ್ರಮಿಸಿದೆ. ಭಾರತದ ಉಜ್ವಲ ಭವಿಷ್ಯ ರೂಪಿಸಲು ಹಾಗೂ ತಮ್ಮ ಬದುಕನ್ನು ಹೇಗೆ ಸಾಗಿಸಬೇಕೆಂಬ ಚಿಂತನೆಗಳ ಒಂದು ಶ್ರೇಷ್ಠ ಮಾರ್ಗವೆ ರಾಷ್ಟ್ರೀಯ ಸೇವಾ ಯೋಜನೆ ಎಂದು ದ.ಕ ಜಿಲ್ಲಾ ಸ್ವಚ್ಛ ಭಾರತ್ ಮಿಷನ್ (ಗ್ರಾ) ಸಂಯೋಜಕ ಡೊಂಬಯ್ಯ ಇಡ್ಕಿದು ಹೇಳಿದ್ದಾರೆ.
ಅವರು ಸೈಂಟ್ ರೇಮಂಡ್ ಕಾಲೇಜಿನ ವಾಮಂಜೂರಿನ ಎನ್ ಎಸ್‌ಎಸ್ ಹಾಗೂ ರೆಡ್ ಕ್ರಾಸ್ ಘಟಕ ಉದ್ಘಾಟಿಸಿ ಮಾತನಾಡಿದರು.
ಗಾಂಧೀಜಿಯವರ ವಿಶ್ವ ವಿದ್ಯಾಲಯದ ಕಲ್ಪನೆಯೆ ಬೇರೆ .ಅಲ್ಲಿ ಅವರು ಪರಿಶ್ರಮ ಮತ್ತು ಜೀವನಾನುಭವಕ್ಕೆ ಆದ್ಯತೆ ನೀಡುತ್ತಾರೆ. ಶಾಂತಿ, ಆಹಿಂಸೆ ಪರಸ್ಪರ ಪ್ರೀತಿಯಿಂದ ಬದುಕನ್ನು ಕಲಿತರೆ ರಾಷ್ಟ್ರದ ಆಭ್ಯದಯ ಸಾಧ್ಯ ಎಂದರು.
ವಿದ್ಯಾರ್ಥಿಗಳು ಹೆಚ್ಚು ಈ ಸಂಘಟನೆಯಲ್ಲಿ ಪಾಲ್ಗೋಳ್ಳುವ ಮೂಲಕ ವಕ್ತಿತ್ವ ವಿಕಸನ ಸೂಕ್ತ ವೇದಿಕೆ ಬಳಸಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಪ್ರಾಂಶುಪಾಲರು ಸಿ.ಜೇಸಿಂತ ಕಾಸ್ತಾ ಯೋಜನಾ ಸಂಯೋಜಕರು ಸುಜನಾ, ವಿಧ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.
Next Story