ಹಳೆಯಂಗಡಿ| ಗಣೇಶೋತ್ಸವ: ರಿಕ್ಷಾ ಚಾಲಕ, ಮಾಲಕರ ಸಂಘದಿಂದ ಉಪಾಹಾರ ವಿತರಣೆ
ಹಳೆಯಂಗಡಿ: ಇಲ್ಲಿನ ಹಳೆಯಂಗಡಿ 34ನೇ ಗಣೋಶೋತ್ಸವ ಪ್ರಯುಕ್ತ ಸೋಮವಾರ ನಡೆದ ಶೋಭಾಯಾತ್ರೆ ನಡೆಯಿತು.
ಇಲ್ಲಿನ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದಿಂದ ಪ್ರತೀ ವರ್ಷದಂತೆ ಎಲ್ಲಾ ಧರ್ಮೀಯ ರಿಕ್ಷಾ ಚಾಲಕರು ಮತ್ತು ಮಾಲಕರು ಸಂಭ್ರಮದಿಂದ ಆಚರಿಸಿದರು. ಈ ಪ್ರಯುಕ್ತ ಸಾರ್ವಜನಿಕಕರಿಗೆ ಉಪಾಹಾರ ಮತ್ತು ತಂಪು ಪಾನೀಯದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಆಟೊ ರಿಕ್ಷಾ ಚಾಲಕ- ಮಾಲಕರ ಸಂಘದ ಸದಸ್ಯರು ಉಪಾಹಾರ ಪಾನೀಯಗಳನ್ನು ಹಂಚಿದರು. ಪ್ರತೀ ಎರಡು ವರ್ಷಕ್ಕೆ ನಡೆಯುವ ಹಳೆಯಂಗಡಿ ಕದಿಕೆ ಉರೂಸ್ ಸಂದರ್ಭ ಸಂದಲ್ ಮೆರವಣಿಗೆಗೂ ಆಟೊ ರಿಕ್ಷಾ ಚಾಲಕರು ಉಪಾಹಾರ ತಂಪು ಪಾನೀಯ ಹಂಚುತ್ತಾರೆ.
Next Story