ಆನ್‌ಲೈನ್ ಹೂಡಿಕೆ ಮಾಡಿಸಿ ವಂಚನೆ: ಪ್ರಕರಣ ದಾಖಲು
ಮಂಗಳೂರು, ಸೆ.25: ಆನ್‌ಲೈನ್ ಮೂಲಕ ಹಣ ಹೂಡಿಕೆ ಮಾಡಿಸಿ ಬಳಿಕ ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನ್ನ ವಾಟ್ಸಪ್‌ಗೆ ಜು.23ರಂದು ಕಂಪೆನಿಯೊಂದರ ಹೆಸರಿನಲ್ಲಿ ಮೆಸೇಜ್ ಬಂದಿತ್ತು. ಪಾರ್ಟ್ ಟೈಮ್ ಟಾಸ್ಕ್‌ಗಳನ್ನು ಪ್ರತಿದಿನ ಮಾಡಿದರೆ ಶೇ.30 ಲಾಭ ಗಳಿಸಬಹುದು ಎಂದು ತಿಳಿಸಲಾಗಿತ್ತು. ಬಳಿಕ ಟೆಲಿಗ್ರಾಂ ಆ್ಯಪ್‌ನಲ್ಲಿರುವ ವ್ಯಕ್ತಿಯ ಮೂಲಕ ಕಾಶ್ಮೀರ್ 2233 ಎಂಬ ವ್ಯಕ್ತಿಯನ್ನು ಪರಿಚಯಿಸಿ ಮಾರ್ಕೆಟಿಂಗ್ ಕಂಪೆನಿಯ ಗುಂಪಿನಲ್ಲಿ ಸೇರಿಸಿ ಆಮಿಷವೊಡ್ಡ ಲಾಗಿತ್ತು. ಇದನ್ನು ನಂಬಿದ ತಾನು ಹಂತ ಹಂತವಾಗಿ 10,52,000 ರೂ. ಹಣ ಹೂಡಿಕೆ ಮಾಡಿರುವೆ. ಆದರೆ ನನಗೆ ಹಣ ವಾಪಸ್ ನೀಡದೆ ವಂಚಿಸಲಾಗಿದೆ ಎಂದು ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.
Next Story