ದ.ಕ.ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಮಂಗಳೂರು,ಆ.29: ದ.ಕ.ಜಿಲ್ಲೆಯಲ್ಲಿ ಗುರುವಾರ ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಅಲ್ಲದೆ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಈ ಮಧ್ಯೆ ಹವಾಮಾನ ಇಲಾಖೆಯು ಸೆ.1ರವರೆಗೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.
ಗುರುವಾರ ಬೆಳಗ್ಗಿನವರೆಗೆ ಬೆಳ್ತಂಗಡಿ 20.7 ಮಿಮೀ, ಬಂಟ್ವಾಳ 17.5 ಮಿ.ಮೀ, ಮಂಗಳೂರು 13.7 ಮಿ.ಮೀ, ಪುತ್ತೂರು 39 ಮಿ.ಮೀ, ಸುಳ್ಯ 36.1 ಮಿ.ಮೀ, ಮೂಡುಬಿದಿರೆ 18.7 ಮಿ.ಮೀ, ಕಡಬ 22.1ಮಿ.ಮೀ, ಮೂಲ್ಕಿ 18.7 ಮಿ.ಮೀ, ಉಳ್ಳಾಲ 22.7 ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯ ದಿನದ ಸರಾಸರಿ ಮಳೆ 29.1ಮಿ.ಮೀ. ಆಗಿದೆ.
ಉಪ್ಪಿನಂಗಡಿ ನೇತ್ರಾವತಿ, ಕುಮಾರಧಾರ ನದಿಯಲ್ಲಿ 25.12 ಮೀ., ಬಂಟ್ವಾಳ ನೇತ್ರಾವತಿ ನದಿಯಲ್ಲಿ 3.1 ಮೀ, ಹಾಗೂ ಗುರುಪುರ ಫಲ್ಗುಣಿ ನದಿಯಲ್ಲಿ 2.18 ಮೀ.ನಲ್ಲಿ ನೀರು ಹರಿಯುತ್ತಿತ್ತು.
Next Story