ಪಣಂಬೂರು: ಅಂದರ್ ಬಾಹರ್ ಆಡುತ್ತಿದ್ದ ಆರೋಪದಲ್ಲಿ 7 ಮಂದಿ ಸೆರೆ
ಪಣಂಬೂರು, ನ.13: ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಆಡುತ್ತಿದ್ದ 7ಮಂದಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ರಾಜಾಸಾಬ್ ನದಾಫ್, ಕಂಠೇಶ್ ಬಿ.ಮೇಲಿನ ಮನಿ, ತಿಮ್ಮಣ್ಣ ವಡ್ಡರ್, ಕಲ್ಲಪ್ಪ, ಶರಪ್ಪ, ಶಿವಾನಂದ, ವೀರೇಶ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳು 62 ನೇ ತೋಕೂರು ಗ್ರಾಮದ ತೋಕೂರು ರೈಲು ನಿಲ್ದಾಣದ ಬಳಿ ಕಾಡುಪೊದೆಗಳ ಮಧ್ಯೆ ಅಂದರ್ ಬಾಹರ್ ಜೂಜಾಡುತ್ತಿದ್ದರು ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 5,220 ರೂ. ನಗದು ಸಹಿತ ಇತರ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Next Story