ಪ್ರತಿಮಾ ಪ್ರದೀಪ್ ಗಟ್ಟಿಗೆ ಪಿಎಚ್‌ಡಿ ಪದವಿ

ಮಂಗಳೂರು : ಸಂತ ಜೋಸೆಫ್ ತಾಂತ್ರಿಕ ವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರತಿಮಾ ಪ್ರದೀಪ್ ಗಟ್ಟಿ ಇವರು ಡಾ.ಕೆ.ಜ್ಯೋತಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಇನ್‌ವೆಸ್ಟಿಗೇಶನ್ ಆಫ್ ಇನ್‌ಹಿಬಿಶನ್ ಎಫೆಕ್ಟ್ ಆಫ್ ನೈಟ್ರೋಜನ್ ಕಂಟೈನಿಂಗ್ ಆರ್ಗಾನಿಕ್ ಕಂಪೌಂಡ್ಸ್ ಆನ್ ಕೊರೋಶನ್ ಆಫ್ ಮೈಲ್ಡ್ ಸ್ಟೀಲ್ ಇನ್ ಹೈಡ್ರೋಕ್ಲೋರಿಕ್ ಆಸಿಡ್ ಮೀಡಿಯಂ’ ಎಂಬ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಪ್ರತಿಮಾ ಪ್ರದೀಪ್ ಗಟ್ಟಿ ಅವರು ಕೊಲ್ಯ ಶೇಖರ ಗಟ್ಟಿ ಮತ್ತು ಸುಮತಿ ಗಟ್ಟಿಯವರ ಪುತ್ರಿ, ಬಿ.ಸಿ.ರೋಡಿನ ದಿ.ವಾಸುಗಟ್ಟಿ ಮತ್ತು ಪುಷ್ಪಾವತಿಯವರ ಸೊಸೆ ಹಾಗೂ ಪ್ರದೀಪ್ ಕುಮಾರ್‌ರವರ ಪತ್ನಿ.
Next Story