ಆರೋಗ್ಯಕರ ಸ್ಪರ್ಧೆಯಿಂದ ಬದುಕಿನಲ್ಲಿ ಪ್ರಗತಿ: ಅನುಪಮ್ ಅಗರ್ವಾಲ್
ಮಂಗಳೂರು : ಜೀವನದಲ್ಲಿ ಸ್ಪರ್ಧಾತ್ಮಕ ಪ್ರವೃತ್ತಿ ಇದ್ದರೆ ಮಾತ್ರ ಯಶಸ್ಸು ಸಾಧ್ಯ. ನಮ್ಮ ದೈನಂದಿನ ಬದುಕು ಹಾಗೂ ಪ್ರಗತಿಗೆ ಸ್ಪರ್ಧಾತ್ಮಕ ಯೋಜನೆಯು ನೆರವು ನೀಡುತ್ತದೆ. ಆರೋಗ್ಯಕರ ಸ್ಪರ್ಧೆಗಳಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಹೇಳಿದರು.
ನಗರದ ರೋಶನಿ ನಿಲಯದ ಸ್ಕೂಲ್ ಆಫ್ ಸೋಷಿಯಲ್ ವರ್ಕ್‌ನಲ್ಲಿ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಅಂತರ ಕಾಲೇಜು ಪ್ರತಿಭಾ ಸ್ಪರ್ಧೆ ‘ಎಂಪೋರಿಯಾ-ದಿ ಬ್ಯಾಟಲ್ ಆಫ್ ದಿ ಎಂಪೈರ್ಸ್’ನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಉಪ ಪ್ರಾಂಶುಪಾಲೆ ಡಾ. ಜೆನ್ನಿಸ್ ಮೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜಿನ ರಿಜಿಸ್ಟ್ರಾರ್ (ಪರೀಕ್ಷಾಂಗ) ಪ್ರೊ.ವಿನೀತಾ.ಕೆ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಇಫ್ರಾ ಆಯಿಶಾ ಪ್ರಾಸ್ತಾವಿಕವಾಗಿ ಮಾತನಾಡಿ ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಹಾಗೂ ಸ್ಪರ್ಧೆಯ ಸಂಯೋಜಕಿ ಸಾರಿಕ್ ಅಂಕಿತಾ ವಂದಿಸಿದರು. 29 ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.