ಡಿ.29 ರಂದು ನಾಟೆಕಲ್ ನಲ್ಲಿ ಜನಜಾಗೃತಿ ಸಭೆ
ದೇರಳಕಟ್ಟೆ:ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆ ಇದರ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಮಾದಕದ್ರವ್ಯ ಮತ್ತು ಅಪರಾಧ ಚಟುವಟಿಕೆಗಳ ಕುರಿತು ಜನ ಜಾಗೃತಿ ಸಭಾ ಕಾರ್ಯಕ್ರಮವು ಡಿ.29 ಭಾನುವಾರ ಸಂಜೆ ಏಳು ಗಂಟೆಗೆ ನಾಟೆಕಲ್ ಜಂಕ್ಷನ್ ನಲ್ಲಿ ನಡೆಯಲಿದೆ.
ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆ ಅಧ್ಯಕ್ಷ ಹಾಶಿಮ್ ಬಂಡಸಾಲೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸ್ಪೀಕರ್ ಯುಟಿ ಖಾದರ್, ಮಂಗಳೂರು ವಿವಿ ಉಪಕುಲಪತಿ ಪ್ರೊ.ಪಿ.ಎಲ್.ಧರ್ಮ, ಸಹಾಯಕ ಪೊಲೀಸ್ ಆಯುಕ್ತ ಗೀತಾ ಕುಲಕರ್ಣಿ, ಡಾ. ರುಕ್ಸಾನ ಹಸನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಜೊತೆ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್
ಉಪಾಧ್ಯಕ್ಷ ಅಬೂಬಕ್ಕರ್ ಹಾಜಿ ನಾಟೆಕಲ್, ಗೌರವ ಅಧ್ಯಕ್ಷ ಪಿ.ಎಸ್ ಮೊಯ್ದಿನ್ ಕುಂಞಿ ಸದಸ್ಯ ಅಬ್ದುಲ್ ರಝಾಕ್ ಶಾಲಿಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story