ಬೆಲೆ ಏರಿಕೆ, ನಿರುದ್ಯೋಗದ ವಿರುದ್ಧ ಪ್ರಜಾಪ್ರಭುತ್ವ ಉಳಿಸಲು ಒತ್ತಾಯಿಸಿ ಸಾರ್ವಜನಿಕ ಸಭೆ
ಮಂಗಳೂರು, ಸೆ.12: ಬೆಲೆಏರಿಕೆಯನ್ನು ತಡೆಗಟ್ಟಿರಿ,ನಿರುದ್ಯೋಗವನ್ನು ತಡೆಗಟ್ಟಿರಿ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿರಿ ಎಂಬ ವಿಷಯವನ್ನು ಮುಂದಿಟ್ಟು ಪ್ರಚಾರಾಂದೋಲನ ವಾರಾಚರಣೆ ನಡೆಸಲು ಸಿಪಿಎಂ ಕೇಂದ್ರ ಸಮಿತಿಯು ಕರೆಯಂತೆ ಮಂಗಳವಾರ ಮೂಡಬಿದ್ರಿ ಸ್ವರಾಜ್ಯ ಮೈದಾನದ ಬಳಿ ಬಹಿರಂಗ ಸಾರ್ವಜನಿಕ ಸಭೆಯನ್ನು ನಡೆಯಿತು.
ಸಭೆಯನ್ನು ಉದ್ದೇಶಿಸಿ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ವಸಂತ ಆಚಾರಿಯವರು ಮಾತನಾಡಿ,2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನಾಯಕತ್ವದ ಕೇಂದ್ರ ಸರಕಾರ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.ಆಹಾರ ವಸ್ತುಗಳ,ಅಗತ್ಯ ವಸ್ತುಗಳು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ,ರಸಗೊಬ್ಬರ ಇನ್ನಿತರೆ ವಸ್ತುಗಳ ದರ ಏರಿಕೆಯಾಗಿದೆ. ನಿರುದ್ಯೋಗ ನಿಯಂತ್ರಿಸುವ ಯಾವುದೇ ಕಾರ್ಯಕ್ರಮಗಳಿಲ್ಲ.ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಅನುದಾನವನ್ನೇ ಕಡಿತ ಗೊಳಿಸಲಾಗಿದೆ.ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಹೊಸ ಉದ್ಯೋಗದ ಕಾತರಿ ಇಲ್ಲ.ಗುತ್ತೀಗೀಕರಣ ವ್ಯಾಪಕಗೊಂಡಿದೆ.ತಾತ್ಕಾಲಿಕ ನೆಲೆಯ ಕೆಲಸಗಳು ಇವೆ. ಬ್ಯಾಂಕ್,ವಿಮಾರಂಗ, ರೈಲ್ವೆ ರಂಗಗಳು ಖಾಸಗೀ ರಂಗದ ಕೈಗೆ ಹೋದುದರಿಂದ ದೇಶದ ಭದ್ರತೆ ಅಪಾಯಕ್ಕೆ ಸಿಲುಕಿದೆ ಎಂದು ಅವರು ಹೇಳಿದರು.
ದೇಶದ ರೈತ ಸಂಘಟನೆಗಳ ಹೋರಾಟದಿಂದಾಗಿ ಪ್ರಧಾನಿ ಕ್ಷಮೆಯಾಚಿಸಿ ಕ್ಷಿಷಿ ನೀತಿಯನ್ನು ವಾಪಾಸು ಪಡೆಯುವ ಭರವಸೆಯನ್ವು ನೀಡುವಂತಾಯಿತು.ವಿದ್ಯುತ್ ರಂಗದ ಖಾಸಗೀಕರಣವನ್ನು ದೇಶದ ಜನತೆ ಹಿಮ್ಮೆಟ್ಟಿಸಬೇಕಾಗಿದೆ ಎಂದು ಅವರು ಹೇಳಿದರು.
ಸಂವಿಧಾನ ಬದ್ಧ ಹಕ್ಕುಗಳ ಮೇಲೆ ಧಾಳಿಗಳು ನಿರಂತರ ನಡೆಯುತ್ತಿದೆ.ನಿಯಮಿತವಾಗಿ ಪಾರ್ಲಿಮೆಂಟ್ ಸಭೆಗಳು ನಡೆಯ ಬೇಕು. ಪ್ರಧಾನಿಗಳು ಸಭೆಗಳಲ್ಲಿ ಉಪಸ್ಥಿತರಿರಬೇಕು.ಸಭೆ ಸಮಾರಂಭಗಳ ತಪ್ಪು ನೀತಿಗಳ ವಿರುದ್ಧ ಪ್ರತಿಭಟಿಸಲು ಅವಕಾಶ ನಿರಾಕರಣೆಯಾಗುತ್ತಿವೆ. ದೇಶ ದ್ರೋಹದ ಆರೋಪ ಹೊರಿಸಿ ಜೈಲಿಗಟ್ಟಲಾಗುತ್ತಿದೆ. ಅನಗತ್ಯವಾಗಿ ಹೆಸರು ಬದಲಾವಣೆಯ ರಾಜಕೀಯ ನಡೆಯುತ್ತಿದೆ. ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಹಿಂಸೆ ಹೆಚ್ಚುತ್ತಿದೆ.ಸರ್ವಾಧಿಕಾರಿ ಪ್ರವ್ರತ್ತಿ ಮೇಲೈಸುತ್ತಿದೆ. ಬಹುತ್ವವನ್ನು ಉಳಿಸ ಬೇಕಿದೆ ಎಂದ ಅವರು ರಾಜ್ಯ ಸರಕಾರ ತನ್ನ ಐದು ಭರವಸೆಗಳನ್ನು ಸರಿಯಾಗಿ ತಾರತಮ್ಯವಿಲ್ಲದೆ ಜಾರಿಗೊಳಿಸಬೇಕು.ಎಲ್ಲಾ ವಿಭಾಗದ ಜನಬೆಂಬಲ ಇದೆ. ದುಡಿಯುವ ಜನತೆಯ ಬೇಡಿಕೆಗಳು ನೆನೆಗುದಿಗೆ ಬಿದ್ದಿದೆ.ಭ್ರಷ್ಟಾಚಾರದ ತನಿಖೆಗಳು ನಡೆದು ಶಿಕ್ಷೆಯಾಗಬೇಕು ಎಂದ ಅವರು ಜಾತ್ಯತೀತ ಜನತಾದಳದ ನಾಯಕರಾದ ಅಪ್ಪ-ಮಗನ ಹೆಜ್ಜೆ ರಾಜ್ಯ ಮತ್ತು ದೇಶಕ್ಕೆಮಾರಕವಾಗಿದೆ. ಮೂರನೆ ಶಕ್ತಿಯಾಗಿ ಉಳಿಯಬೇಕು. ಇಲ್ಲದಿದ್ದರೆ ಜೆಡಿಎಸ್ ರಾಜಕೀಯ ಮುಗಿದಂತೆ ಎಂದು ಅವರು ಲೇವಡಿ ಮಾಡಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಸಿಪಿಎಂ ದೇಶದ ಜನತೆಯ ಹಿತಾಸಕ್ತಿಯನ್ನು ಕಾಪಾಡಲು ರಾಜಿರಹಿತ ಹೋರಾಟ ಮಾಡುತ್ತದೆ. ಇದಕ್ಕೆ ಜನತೆಯು ಬೆಂಬಲಿಸಬೇಕೆಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಕಾರ್ಯದರ್ಶಿ ರಮಣಿಯವರು ವಹಿಸಿದ್ದರು.
ವೇದಿಕೆಯಲ್ಲಿ ಪಕ್ಷದ ಮುಂದಾಳುಗಳಾದ ಗಿರೀಜ,ಶಂಕರ,ರಾಧ,ಕ್ರಷ್ಣಪ್ಪ ರವರು ಉಪಸ್ಥತರಿದ್ದರು. ಪ್ರಾರಂಭದಲ್ಲಿ ಕ್ರಷ್ಣಪ್ಪ ಸ್ವಾಗತಿಸಿ, ರಾಧ ವಂದಿಸಿದರು.