ಪುತ್ತೂರು: ಚೆಲ್ಯಡ್ಕ ಸೇತುವೆ ಮುಳುಗಡೆ
ಪುತ್ತೂರು: ಕಳೆದ 2 ದಿನಗಳಿಂದ ಸುರಿದ ಭಾರೀ ಮಳೆಗೆ ಪುತ್ತೂರು ಪಾಣಾಜೆ ಸಂಪರ್ಕದ ಚೆಲ್ಯಡ್ಕ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ರವಿವಾರ ಮುಂಜಾನೆಯಿಂದಲೇ ಸೇತುವೆ ಮುಳುಗಡೆಯಾಗಿದ್ದು ಈ ಭಾಗದ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಈ ಭಾಗದಲ್ಲಿ ಸಂಚರಿಸುವ ವಾಹನಗಳು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಆರ್ಯಾಪು ಗ್ರಾಮದ ಸಂಟ್ಯಾರ್ ಎಂಬಲ್ಲಿ ತಿರುವು ಪಡೆದುಕೊಂಡು ರೆಂಜಕ್ಕೆ ಸೇರಿ ಅಲ್ಲಿಂದ ಪಾಣಾಜೆಗೆ ಸುತ್ತು ಬಳಸಿ ಸಂಚಾರ ಮಾಡುತ್ತಿದೆ.
ಮುಳುಗು ಸೇತುವೆ ಎಂದೇ ಪ್ರಚಲಿತವಾಗಿರುವ ಚೆಲ್ಯಡ್ಕ ಸೇತುವೆಯು ಬ್ರಿಟೀಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಸೇತುವೆಯಾಗಿದ್ದು ತೀರಾ ಕೆಳಭಾಗದಲ್ಲಿದೆ. ಇದರಿಂದಾಗಿ ಪ್ರತಿವರ್ಷವೂ ಜೋರಾಗಿ ಮಳೆ ಬಂದಾಗ ಸೇತುವೆ ಮುಳುಗಡೆಯಾಗುತ್ತಿದ್ದು, ವರ್ಷಕ್ಕೆ ಏಳೆಂಟು ಬಾರಿ ಮುಳುಗಡೆಯಾಗುತ್ತದೆ. ಇದರಿಂದಾಗಿ ಈ ಭಾಗದ ಜನರು ಪರದಾಡುವಂತಾಗುತ್ತದೆ. ಈ ಬಾರಿ ಇಂದು ಎರಡನೇ ಬಾರಿ ಮುಳುಗಡೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Next Story