ಪುತ್ತೂರು : ಶಂಕಿತ ಡೆಂಗಿ ಜ್ವರಕ್ಕೆ ಬಾಲಕಿ ಬಲಿ
ಪುತ್ತೂರು : ಜ್ವರ ಪೀಡಿತಳಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪುತ್ತೂರು ನಗರದ ಬೊಳುವಾರಿನಲ್ಲಿ ವಾಸ್ತವ್ಯವಿರುವ ಬಾಲಕಿಯೋರ್ವಳು ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.
ಮೂಲತಃ ಸುರತ್ಕಲ್ ಕೃಷ್ಣಾಪುರ ನಿವಾಸಿ ನಾಮ್ದೇವ್ ಆಚಾರ್ಯ ಎಂಬವರ ಪುತ್ರಿ ಸಾನಿಧ್ಯ(8) ಶಂಕಿತ ಡೆಂಗಿ ಪೀಡಿತರಾಗಿ ಮೃತಪಟ್ಟ ಬಾಲಕಿ.
ಜ್ವರ ಪೀಡಿತಳಾಗಿದ್ದ ಸಾನಿಧ್ಯಳನ್ನು ಪುತ್ತೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆಕೆ ಚೇತರಿಸಿಕೊಳ್ಳದ ಹಿನ್ನಲೆ ಯಲ್ಲಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ದಾಖಲಿಸಲಾಗಿತ್ತು. ಅಲ್ಲಿ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಡೆಂಗಿ ಹಾಗೂ ನ್ಯೂಮೋನಿಯಾ ಬಾಧಿಸಿರುವುದರಿಂದ ಆಕೆಯ ಸಾವು ಸಂಭವಿಸಿರುವುದಾಗಿ ತಿಳಿದು ಬಂದಿದೆ.
ಮೃತ ಬಾಲಕಿ ತಂದೆ ಮತ್ತು ತಾಯಿಯನ್ನು ಅಗಲಿದ್ದಾಳೆ.
Next Story