ಪುತ್ತೂರು: ಜಪಾನ್ ಮೂಲದ ವ್ಯಕ್ತಿ ಪತ್ತೆ; ಪೊಲೀಸ್ ವಶಕ್ಕೆ
ಪುತ್ತೂರು : ಜಪಾನ್ ಮೂಲದ ವ್ಯಕ್ತಿ ಎನ್ನಲಾದ ಯುವಕನೋರ್ವನನ್ನು ಪುತ್ತೂರು ನಗರ ಠಾಣೆಯ ಪೊಲೀಸರು ಗಡಿಯಾರ ಸಮೀಪ ಶನಿವಾರ ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.
ಜಪಾನ್ ನ ಸುಯೋಷಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈತನ ಪತ್ತೆ ಹಚ್ಚಿದ ಸ್ಥಳೀಯರು ಈ ಬಗ್ಗೆ ಪುತ್ತೂರು ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.
Next Story