ಪುತ್ತೂರು: ಹಿರಿಯ ಕಾಂಗ್ರೆಸ್ ನಾಯಕ ಎನ್. ಸುಧಾಕರ ಶೆಟ್ಟಿ ನಿಧನ
ಪುತ್ತೂರು: ಉದ್ಯಮಿ, ಸಾಮಾಜಿಕ-ಧಾರ್ಮಿಕ ಮುಂದಾಳು ಮತ್ತು ದಾನಿ ಎನ್ ಸುಧಾಕರ ಶೆಟ್ಟಿ ಅವರು ರವಿವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಸ್ಥಳೀಯ ರಾಜಕಾರಣದಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸುಧಾಕರ ಶೆಟ್ಟಿ ಅವರು ಹತ್ತು ವರ್ಷಗಳ ಕಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಥಮ ವಿದ್ಯಾರ್ಥಿ ಸಂಘದ ಅಧ್ಯಕ್ಷರೂ ಆಗಿದ್ದರು.
ನೆಲ್ಲಿಕಟ್ಟೆ ಸುಧಾಕರ ಶೆಟ್ಟಿ ಅವರು ಕಳೆದ 42 ವರ್ಷಗಳಿಂದ ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವ ಆಚರಣೆಯ ರೂವಾರಿಯಾಗಿದ್ದರು.
ಮೃತದೇಹವನ್ನು ಸುಧಾಕರ ಅವರ ನೆಲ್ಲಿಕಟ್ಟೆಯಲ್ಲಿರುವ ಮನೆಗೆ ಸೋಮವಾರ ತಂದ ಬಳಿಕ ಅಂತ್ಯಕ್ರಿಯೆ ವಿಧಿವಿಧಾನಗಳು ನಡೆಯಲಿವೆ ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ.
Next Story