ಜನರ ನಡುವೆ ಕಂದಕ ಸೃಷ್ಟಿಸುವುದನ್ನು ರಾಮ ಮೆಚ್ಚುವುದಿಲ್ಲ: ಪದ್ಮರಾಜ್
ಮಂಗಳೂರು, ಜ. 3: ರಾಮ ಮಂದಿರ ಲೋಕಾರ್ಪಣೆ ಹೆಮ್ಮೆ ವಿಚಾರ. ಶ್ರದ್ಧಾ ಭಕ್ತಿಯಿಂದ ಆಚರಿಸಬೇಕಾದ ಕಾರ್ಯಕ್ರಮವನ್ನು ಬಿಜೆಪಿಯ ಜನಪ್ರತಿನಿಧಿಗಳು, ಜವಾಬ್ಧಾರಿ ಸ್ಥಾನದಲ್ಲಿ ಇರುವವರು ಜನರ ನಡುವೆ ಕಂದಕ ಸಷ್ಟಿಸಲು ಬೇಕಾಗಿ ರಾಜಕೀಯ ಮಾಡುತ್ತಿರುವುದನ್ನು ರಾಮನು ಮೆಚ್ಚಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಬುಧವಾರ ಮಾತನಾಡಿದ ಅವರು, ಬಿಜೆಪಿ ಜನಪ್ರತಿನಿಧಿಗಳು ಅವಿದ್ಯಾವಂತರಂತೆ ಹೇಳಿಕೆ ನೀಡುತ್ತಿದ್ದಾರೆ. ಆಯೋಧ್ಯೆ ವಿಚಾರ ವಿವಾದ ಇತ್ತು, ಅದು ಕೋರ್ಟ್ ನಲ್ಲಿ ಇತ್ಯರ್ಥ ಆಗಿದೆ. ಇದರಲ್ಲಿರಾಜಕೀಯ ಮಾಡುವ ಔಚಿತ್ಯವೇನು? ಎಂದು ಪ್ರಶ್ನಿಸಿದರು.
ರಾಮ ಭಕ್ತರ ಮೇಲೆ ಕೈ ಸರ್ಕಾರಕ್ಕೆ ಕೋಪವೇಕೆ? ಎಲ್ಲಿಂದ ಎಲ್ಲಿಗೆ ಕನೆಕ್ಟ್. ಹುಬ್ಬಳ್ಳಿಯಲ್ಲಿ ಇಬ್ಬರ ಮೇಲೆ ಹಳೆಯ ಕ್ರಿಮಿನಲ್ ಪ್ರಕರಣ ಇತ್ತು .ಕೋರ್ಟ್ ಆಜ್ಞೆ ಪ್ರಕಾರ ವಾರಂಟ್ ಇರುವಾಗ ಬಂಧಿಸಲಾಗಿದೆ. ಇದರಲ್ಲಿ ರಾಜಕೀಯ ಹೇಗೆ? ಹೇಳಿಕೆ ನೀಡುವಾಗ ಸಾಮಾನ್ಯ ಜ್ಞಾನ ಇರಬೇಕು. ನಿಮ್ಮ ಸರ್ಕಾರ ಇತ್ತಲ್ಲ, ಪ್ರಕರಣ ಮುಗಿಸಬಹುದಿತ್ತಲ್ಲ, ಎಂದು ಸ್ಥಳೀಯ ಶಾಸಕರ ಹೇಳಿಕೆಯನ್ನು ಉಲ್ಲೇಖಿಸಿ ಅವರು ಪ್ರತಿಕ್ರಿಯಿಸಿದರು.
ಜನ ಮೆಚ್ಚುವ ಕೆಲಸ ಮಾಡಿ. ಮಂಗಳೂರಲ್ಲಿ ಎಲ್ಲ ಅಗೆದು ಹಾಕಿದ್ದಾರೆ, ಇದರ ಬಗ್ಗೆ ಗಮನ ಹರಿಸ್ತಿದೀರಾ? ಕೈ ಸರ್ಕಾರ ಬಂದ ಮೇಲೆ ಹಿಂದೂಗಳಿಗೂ ಅನುಕೂಲವಾಗಿದೆ. ಶಬರಿಮಲೆಗೆ ವಿಶೇಷ ಬಸ್, ಅರ್ಚಕರಿಗೆ ಗೌರವ ಧನ ಹೆಚ್ಚಳ, ಸಾಮೂಹಿಕ ವಿಮೆ, ದೀಪಾವಳಿ ವೇಳೆ ಗೋಪೂಜೆ ಆಜ್ಞೆ, ಕಾಶಿ ಹೋಗುವವರ ಸಹಾಯಧನ ಹೆಚ್ಚಳ. ಇದೆಲ್ಲ ಕಣ್ಣಿಗೆ ಕಾಣಲ್ವ? ಎಂದು ಪ್ರಶ್ನಿಸಿದರು.
ರಜೆ ಘೋಷಣೆಗೆ ರಾಜ್ಯ ಸರಕಾರವನ್ನು ಒತ್ತಾಯ ಮಾಡಲಾಗುತ್ತಿದೆ. ಕೇಂದ್ರದ ವತಿಯಿಂದ ಕಾರ್ಯಕ್ರಮ ನಡೀತಿದೆ, ಕೇಂದ್ರ ಘೋಷಿಸಲಿ, ಬಿಜೆಪಿ ನಾಯಕರು ಸರಿಯಾಗಿ ಮಾತನಾಡಲಿ ಎಂದರು.
ಲವ್ ಜಿಹಾದ್ ಇಟ್ಕೊಂಡು ಗೆಲ್ಬೇಕು ಅನ್ನೋದು ಹೆಚ್ಚಿನ ದಿನ ನಡೆಯಲ್ಲ. ಜವಾಬ್ದಾರಿಯಿಂದ ವರ್ತಿಸಿ. ಸೌಹಾರ್ದ ವಾತಾವರಣ ಬೆಳೆಸುವುದು ಬಿಟ್ಟು , ಹಾಳು ಮಾಡಬೇಡಿ. ಗ್ಯಾರಂಟಿ ಪೂರೈಸಿದ ಕೈ ಸರ್ಕಾರ ಬಡವರಿಗೆ ಆಶಾಕಿರಣವಾಗಿ ಇತಿಹಾಸ ನಿರ್ಮಿಸಿದೆ. ಅದನ್ನು ಅಭಿನಂದನೆ ಮಾಡುವ ಬದಲು ಪ್ರತಿ ಸಲ ಟೀಕೆ ಮಾಡುವುದಲ್ಲ ಎಂದರು.
ಮುಖಂಡರಾದ ಶಾಂತಲಾ, ಸಂತೋಷ್ ಕುಮಾರ್,
ಚಂದ್ರಕಲಾ, ಉದಯ ಆಚಾರಿ, ರಾಕೇಶ್ ದೇವಾಡಿಗ, ಕೇಶವ ಮರೋಳಿ, ಚೇತನ್ ಕುಮಾರ್, ಯೋಗೀಶ್, ಪ್ರೇಮ್ ಉಪಸ್ಥಿ ತರಿದ್ದರು.