ಸೆ.25ರಂದು ದ.ಕ.ಜಿಲ್ಲೆಯಲ್ಲಿ ರೆಡ್ ಅಲರ್ಟ್: ಹವಾಮಾನ ಇಲಾಖೆ ಘೋಷಣೆ
ಮೀನುಗಾರರು ಎಚ್ಚರಿಕೆ ವಹಿಸುವಂತೆ ಸೂಚನೆ
ಮಂಗಳೂರು, ಸೆ.24: ದ.ಕ.ಜಿಲ್ಲೆಯಲ್ಲಿ ಮತ್ತೆ ಮಳೆ ಚುರುಕುಗೊಂಡಿದ್ದು, ಮಂಗಳವಾರ ಉತ್ತಮ ಮಳೆಯಾಗಿದೆ. ಈ ಮಧ್ಯೆ ಸೆ.25ರಂದು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಮತ್ತು ಸೆ.26ರಂದು ಆರೆಂಜ್ ಅಲರ್ಟ್‌ನ್ನು ಹವಾಮಾನ ಇಲಾಖೆ ಘೋಷಿಸಿದೆ.
ಮಂಗಳವಾರ ಮುಂಜಾವದಿಂದಲೇ ಮಳೆ ಸುರಿಯತೊಡಗಿದೆ. ಮಧ್ಯಾಹ್ನ ವೇಳೆಗೆ ಮಳೆ ಸ್ವಲ್ಪ ಬಿಡುವು ಪಡೆದುಕೊಂಡರೂ ಮಧ್ಯಾಹ್ನ ಮತ್ತೆ ಮಳೆ ತೀವ್ರಗೊಂಡಿತ್ತು. ಜಿಲ್ಲೆಯ ಕಿಲ್ಪಾಡಿಯಲ್ಲಿ 57 ಮಿಮೀ, ಕೋಟೆಕಾರ್‌ನಲ್ಲಿ 56.5 ಮಿಮೀ, ತಲಪಾಡಿಯಲ್ಲಿ 56 ಮಿಮೀ, ಬಾಳದಲ್ಲಿ 54.5 ಮಿಮೀ, ಇಡ್ಕಿದು ಹಾಗೂ ಕೆಮ್ರಾಲ್‌ನಲ್ಲಿ ತಲಾ 53.5 ಮಿಮೀ, ಕಾವಳಪಡೂರು, ಬಾಳ್ತಿಲ, ಕಲ್ಮಡ್ಕಗಳಲ್ಲಿ ತಲಾ 53 ಮಿಮೀ, ಪಾಣಾಜೆಯಲ್ಲಿ 51.5 ಮಿಮೀ ಮಳೆ ದಾಖಲಾಗಿದೆ.
ಉತ್ತಮ ಮಳೆಯೊಂದಿಗೆ ಅರಬ್ಬಿ ಸಮುದ್ರದಲ್ಲಿ ಗಾಳಿಯ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ. ಹಾಗಾಗಿ ಮೀನುಗಾರರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
Next Story