ವಿಟ್ಲ| ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ದಾಂಧಲೆ: ಇಬ್ಬರ ವಿರುದ್ಧ ಪ್ರಕರಣ ದಾಖಲು
ವಿಟ್ಲ: ಕಂದಾಯ ನಿರೀಕ್ಷರ ಕಚೇರಿಯಲ್ಲಿ ದಾಂಧಲೆ ನಡೆಸಿದ ಇಬ್ಬರ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೀರಕಂಬ ಗ್ರಾಮದ ನಿವಾಸಿಗಳಾದ ಹರೀಶ್ ರೈ ಕಲ್ಮಲೆ, ಧನಂಜಯ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ವೀರಕಂಬ ಗ್ರಾಮದ ನೆಕ್ಕಿಲಾರು ನಿವಾಸಿ ಶೇಖ್ ಸುಬಾನ್ ಅವರ 94ಸಿ ಮನೆ ನಿವೇಶನದ ಮಂಜೂರಾತಿ ಸಂಬಂಧಿಸಿ ಮಾತುಕತೆ ನಡೆಸಲು ಬಿಜೆಪಿ ಮುಖಂಡನ ಜತೆಗೆ ಬೆಂಬಲಿಗರು ಕಂದಾಯ ಅಧಿಕಾರಿಯ ಕಚೇರಿಗೆ ಆಗಮಿಸಿದ್ದಾರೆ.
ಮಂಜೂರಾತಿ ವಿಚಾರದಲ್ಲಿ ಕಡತವನ್ನು ತಾಲೂಕು ಕಚೇರಿಗೆ ಈಗಾಗಲೇ ಕಳುಹಿಸಲಾಗಿದೆ ಎಂಬುದನ್ನು ತಿಳಿಸಿದ್ದು, ಅರಣ್ಯ ಇಲಾಖೆಯ ಅಭಿಪ್ರಾಯ ಪಡೆದು ಮಂಜೂರಾತಿಗೆ ಕ್ರಮ ವಹಿಸಲು ಶಿಫಾರಸು ಮಾಡಿದ್ದು, ಉದ್ದೇಶಪೂರ್ವಕವಾಗಿ ಮಂಜೂರಾತಿಗೆ ಅಡ್ಡಿಪಡಿಸಿದ್ದಾಗಿ ಹರೀಶ್ ರೈ ಕಲ್ಮಲೆ ಹಾಗೂ ಧನಂಜಯ ಮಾತಿಗೆ ಮುಂದಾಗಿದ್ದಾರೆ. ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಇದರ ಜತೆಗೆ ಕಚೇರಿಯ ಟೇಬಲ್ ಗೆ ಗುದ್ದಿ ಅದರ ಮೇಲಿದ್ದ ಗಾಜನ್ನು ಪುಡಿ ಮಾಡಿ ಸುಮಾರು 7 ಸಾವಿರ ನಷ್ಟ ಉಂಟು ಮಾಡಿದ್ದಾರೆಂದು ಕಂದಾಯ ನಿರೀಕ್ಷಕ ಎ. ಪ್ರಶಾಂತ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ.