ವಿಟ್ಲ: ಸೂರಿಕುಮೇರು ಜಂಕ್ಷನ್ನಲ್ಲಿ ರಸ್ತೆ ಅಪಘಾತ; ಬೈಕ್ ಸವಾರ ಮೃತ್ಯು
ವಿಟ್ಲ: ಸೂರಿಕುಮೇರು ಜಂಕ್ಷನ್ ನಲ್ಲಿ ಬೈಕ್ ಮತ್ತು ಟೆಂಪೊ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.
ಸುಳ್ಯ ನಿವಾಸಿ, ಸೂರಿಕುಮೇರು ಸಮೀಪದ ಕೋಸ್ಟಲ್ ಕೋಳಿ ಫಾರ್ಮ್ ಕೆಲಸಗಾರ ಪುನೀತ್ ಮೃತಪಟ್ಟ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಅವರು ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಮಾಣಿಯ ಆಂಬ್ಯುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ.
ವಿಟ್ಲ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದು, ತನಿಖೆ ನಡೆಸುತ್ತಿದ್ದಾರೆ.
Next Story