ಬಾಫಖಿ ತಂಙಳ್ ಫೌಂಡೇಶನ್ ಕರ್ನಾಟಕ ಸಮಿತಿ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ, ಸ್ವರ್ಣ ಪದಕ ಪ್ರದಾನ
ಮಂಗಳೂರು: ಲೈಫ್ ಪಬ್ಲಿಷಿಂಗ್ ಟ್ರಸ್ಟ್ ಮಂಗಳೂರು, ಬಾಫಖಿ ತಂಙಳ್ ಫೌಂಡೇಶನ್ ಕರ್ನಾಟಕ, ಎಂಎಸ್‌ಎಫ್ ಕರ್ನಾಟಕ ಇದರ ಸಹಕಾರದೊಂದಿಗೆ ರವಿವಾರ ಹಂಪನಕಟ್ಟೆಯ ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆದ ವಿದ್ಯಾರ್ಥಿಗಳ ಸಮಾವೇಶದಲ್ಲಿ ದ.ಕ. ಜಿಲ್ಲೆಯಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಎಸೆಸೆಲ್ಸಿಯಲ್ಲಿ ಒಟ್ಟು 357 ಮತ್ತು ಪಿಯುಸಿಯಲ್ಲಿ 254 ವಿದ್ಯಾರ್ಥಿಗಳಿಗೆ ಹಾಗೂ ಶೇಕಡಾ 100 ಫಲಿತಾಂಶ ಪಡೆದ 325 ಶಾಲಾ-ಕಾಲೇಜುಗಳಿಗೆ ಪುರಸ್ಕಾರವನ್ನು ನೀಡಲಾಯಿತು.
ಜಿಲ್ಲೆಯ ಒಟ್ಟು 40 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸ್ವರ್ಣ ಪದಕವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ರಾಷ್ಟ್ರೀಯ ಆಯೋಗದ ಕರ್ನಾಟಕ ರಾಜ್ಯ ಅಧ್ಯಕ್ಷ ಡಾ.ಯು.ಟಿ.ಇಫ್ತಿಕರ್ ಅಲಿ ಅವರು ಬಾಫಖಿ ತಂಙಳ್ ಫೌಂಡೇಶನ್ ಉನ್ನತ ವಿದ್ಯಾಭ್ಯಾಸಕ್ಕೆ ನೀಡುವ ಪ್ರಾಯೋಜಕತ್ವ ಯೋಜನೆಗೆ ಸಂಪೂರ್ಣ ಸಹಕರಿಸುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಡಾ.ಯು.ಟಿ.ಇಫ್ತಿಕರ್ ಅಲಿ ಅವರನ್ನು ಸನ್ಮಾನಿಸಲಾಯಿತು.
ಆಳ್ವಾಸ್ ಕಾಲೇಜು ಪ್ರಾಂಶುಪಾಲರಾದ ಡಾ.ಕುರಿಯನ್ ಅವರು ಉನ್ನತ ಶಿಕ್ಷಣದ ಬಗ್ಗೆ ಸಮಗ್ರ ಮಾಹಿತಿ ಮತ್ತು ಮಾರ್ಗದರ್ಶನದ ಶಿಬಿರವನ್ನು ನಡೆಸಿಕೊಟ್ಟರು.
ಬಾಫಖಿ ತಂಙಳ್ ಫೌಂಡೇಶನ್ ಕರ್ನಾಟಕ ಸಮಿತಿ ಅಧ್ಯಕ್ಷ ಡಾ. ಶೇಖ್ ಬಾವ ಮಂಗಳೂರು ಸಮಾರಂಭದ ಅಧ್ಯಕ್ಷತೆ ವಹಿಸಿ ಉನ್ನತ ಶಿಕ್ಷಣ ಪಡೆಯುವ ಪ್ರತಿಭಾವಂತ ವಿದ್ಯಾರ್ಥಿಯ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಬಾಫಖಿ ತಂಙಳ್ ಫೌಂಡೇಶನ್ ಕರ್ನಾಟಕ ಸಮಿತಿಯಿಂದ ನೀಡಲಾಗುವುದು ಎಂದು ಘೋಷಿಸಿದರು.
ಮಸ್ಜಿದ್ ಜಪ್ಪು ಕುಡುಪ್ಪಾಡಿಯ ಮುದರ್ರಿಸ್ ಹೈದರ್ ಅಲೀ ಅಹ್ಸನಿ ದುಅ ನೆರವೇರಿಸಿದರು. ಬ್ಯಾರಿ ಅಕಾಡೆಮಿ ಮಾಜಿ ರಿಜಿಸ್ಟ್ರಾರ್ ಉಮರಬ್ಬ, ಸಯ್ಯಿದ್ ಹಬೀಬುಲ್ಲಾಹಿ ಪೂಕೋಯ ತಂಙಳ್ ಪೆರುವಾಯಿ , ಬಿಲ್ಡ್ ಅಪ್ ಕಾಸರಗೋಡ್ ಕೋಶಾಧಿಕಾರಿ ಮತ್ತು ಸಾಮಾಜಿಕ ಕಾರ್ಯಕರ್ತೆ ಝುಲೈಖಾ ಮಾಹಿನ್, ವಕ್ಛ್ ಸಲಹಾ ಸಮಿತಿ ಜಿಲ್ಲಾಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್, ಸಾಮಾಜಿಕ ಕಾರ್ಯಕರ್ತ ಡಿ.ಐ ಕೈರಂಗಳ, ಜಮಿಯ್ಯತ್ತುಲ್ ಫಲಾಹ್ ಜಿಲ್ಲಾಧ್ಯಕ್ಷ ಕೆ.ಕೆ ಶಾಹುಲ್ ಹಮೀದ್ ಕರಾಯ, ಮನಪಾ ಸದಸ್ಯ ಅಬ್ದುಲ್ ಲತೀಫ್ ಕಂದಕ್, ಅಬ್ದುರ‌್ರಹ್ಮಾನ್ ಮೊಗರ್ಪನೆ, ಅಬ್ದುಲ್ ರಾಝಕ್ ದಮಾಸ್, ಮೊಹಮ್ಮದ್ ಷರೀಫ್ ಕುಡುಪಾಡಿ, ಇಂಜಿನಿಯರ್ ಆಸೀಫ್, ಉದಯ ಹನೀಫ್ ಹಾಜಿ ಕಲ್ಲೇಗ , ಹಾಜಿ ಯೂಸುಫ್ ಜಪ್ಪು , ಪುದು ಗ್ರಾಪಂ ಸದಸ್ಯ ಹಾಶೀರ್ ಪೇರಿಮಾರ್ , ಶಬೀರ್ ತಲಪಾಡಿ , ಸಯ್ಯಿದ್ ಬಂಗೇರುಕಟ್ಟೆ , ಎಂಎಸ್‌ಎಫ್ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ಸಿರಾಜುದ್ಧೀನ್ ನದ್ವಿ ಉತ್ತರ ಪ್ರದೇಶ , ಮಹಿಳಾ ವಿಭಾಗ ಕೇರಳ ಘಟಕದ ರಾಜ್ಯಾಧ್ಯಕ್ಷೆ ಶಾಹೀದಾ ಕಾಸರಗೋಡು , ಪ್ರಧಾನ ಕಾರ್ಯದರ್ಶಿ ಹಫ್ಸೀಲಾ ವಡಗರ ಅತಿಥಿಯಾಗಿದ್ದರು.
ಬಾಫಖಿ ತಂಙಳ್ ಫೌಂಡೇಶನ್ ಕೋಶಾಧಿಕಾರಿ ರಿಯಾಝ್ ಹರೇಕಳ , ನಾಯಕರಾದ ಹನೀಫ್ ಕುಂಜತ್ತೂರು , ಆಶೀಖ್ ಮಲ್ಲೂರು, ಸಿದ್ಧೀಖ್ ಕಡಬ, ಸ್ವಲಾಹುದ್ದೀನ್ ಅಯ್ಯೂಬಿ ಕಡಬ, ಬಿಲಾಲ್ ಕಡಬ, ಜಂಶೀರ್ ಕೈಕಂಬ, ಮುಹಮ್ಮದಲಿ, ಹಮೀದ್ ಫಳ್ನೀರ್, ಸಿತಾರ್ ಮಜೀದ್ ಹಾಜಿ , ಕೆ.ಎಚ್. ಹಮೀದ್ ಕಣ್ಣೂರು , ಫಕೀರಪ್ಪ ಮಾಸ್ಟರ್, ಅದ್ದು, ಹಾಜಿ, ರಶೀದ್ ಹಾಜಿ , ಸಮದ್ ಹಾಜಿ ಮತ್ತು ಜಲೀಲ್ ಎಫ್‌ಎ ಉಪಸ್ಥಿತರಿದ್ದರು.
ಸುಲೈಮಾನ್ ಎಸ್ ಮಂಗಳೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಾಫಖಿ ತಂಙಳ್ ಫೌಂಡೇಶನ್ ಕರ್ನಾಟಕ ಕನ್ವೀನರ್ ಎಎಸ್‌ಇ ಕರೀಮ್ ಕಡಬ ವಿದ್ಯಾರ್ಥಿವೇತನ ಘೋಷಿಸಿದರು. ಸಯ್ಯಿದ್ ಶಾಹುಲ್ ಹಮೀದ್ ತಂಳ್ ಸ್ವಾಗತಿಸಿ, ವಂದಿಸಿದರು. ಝುಲ್ಛಿಕರ್ ಅಲಿ ಎಚ್.ಕಲ್ಲು ಕಾರ್ಯಕ್ರಮ ನಿರೂಪಿಸಿದರು.