ʼಅಬ್ಬಕ್ಕ ರಾಣಿಯ ಹೋರಾಟದಲ್ಲಿ ಉಳ್ಳಾಲದ ಬ್ಯಾರಿಗಳ ಪಾತ್ರʼ ವಿಚಾರಗೋಷ್ಠಿ
ಉಳ್ಳಾಲ: ಮೇಲ್ತನೆ, ಬ್ಯಾರಿ ಎಲ್ತ್ ಕಾರ್ ಪಿನ್ನೆ ಕಲಾವಿದಮಾರೊ ಕೂಟ ದೇರಳಕಟ್ಟೆ, ಉಳ್ಳಾಲ ತಾಲೂಕು ಇದರ ವತಿ ಯಿಂದ ಅಬ್ಬಕ್ಕ ರಾಣಿಯ ಹೋರಾಟದಲ್ಲಿ ಉಳ್ಳಾಲದ ಬ್ಯಾರಿಗಳ ಪಾತ್ರ ಎಂಬ ವಿಷಯದಲ್ಲಿ ವಿಚಾರ ಗೋಷ್ಠಿ ಹಳೆ ಕೋಟೆ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಾಥಮಿಕ ಶಾಲಾ ಸಮಿತಿ ಸದಸ್ಯ ತ್ವಾಹ ಹಾಜಿ "ಮೇಲ್ತೆನೆ ಬ್ಯಾರಿ ಭಾಷೆಯ ಕಾಳಜಿ ಯೊಂದಿಗೆ ನಿರಂತರ ಕಾರ್ಯಕ್ರಮ ಮಾಡುತ್ತಾ ಬರುತ್ತಿದೆ. ಸಮಾಜದ ಅಭಿವೃದ್ಧಿ ಗೆ ಸಂಘಟನಾತ್ಮಕ ಕಾರ್ಯಕ್ರಮ ಅಗತ್ಯ ಇದೆ ಎಂದರು.
ಬಳಿಕ ವಿಚಾರ ಗೋಷ್ಠಿಯಲ್ಲಿ ವಿಚಾರ ಮಂಡನೆ ಮಾಡಿದ ಮೇಲ್ತನೆ ಅಧ್ಯಕ್ಷ ಆಶೀರುದ್ಧೀನ್ ಸಾರ್ತಬೈಲ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ರಾಣಿ ಅಬ್ಬಕ್ಕ ಳ ಜೊತೆ ಬಹಳಷ್ಟು ಬ್ಯಾರಿ ಗಳು ಹೋರಾಟ ಮಾಡಿದ್ದಾರೆ. ಅರಬ್ ರೊಂದಿಗೆ ಸಂಬಂಧ ಬೆಳೆಸುವಲ್ಲಿ, ಆದಿಲ್ ಶಾಹಿ ಸುಲ್ತಾನರೊಂದಿಗೆ, ಮಲಬಾರಿನ ಸಾಮೂದಿರಿ ಸೈನಿಕ ದಳಪತಿ ಮರಕಾರ್ ವಂಶಸ್ಥ ಕುಟ್ಟಿ ಅಲಿ ಪೋಕರ್ ಮರಕ್ಕಾರರೂಂದಿಗೆ ಮಾತುಕತೆ ನಡೆಸಲು ಬ್ಯಾರಿ ಸೈನಿಕ ಮೇಧಾವಿಗಳನ್ನು ಕಳುಹಿಸುತ್ತಿ ದ್ದರು. ಅಲೀ ಖಾನ್ ನಂತಹ ಸೈನಿಕ ದಳಪತಿ ಮೊಹಮ್ಮದ್ ನಂತಹ ಮಂತ್ರಿ ಸಹಿತ ಹಲವರು ಸ್ವಾತಂತ್ರ್ಯ ಹೋರಾಟ ದಲ್ಲಿ ಕೈಜೋಡಿಸಿದ್ದರು ಎಂದರು.
ಮೇಲ್ತನೆ ಗೌರವ ಅಧ್ಯಕ್ಷ ಆಲಿ ಕುಂಞಿ ಪಾರೆ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮದನಿ ಸಂಸ್ಥೆಯ ಕಾರ್ಯದರ್ಶಿ ಅಲ್ತಾಫ್, ಮೇಲ್ತೆನೆ ಸದಸ್ಯ ಆಸೀಫ್ ಬಬ್ಬುಕಟ್ಫೆ, ಮತ್ತಿತರರು ಉಪಸ್ಥಿತರಿದ್ದರು.
ಮೇಲ್ತನೆ ಮಾಜಿ ಅಧ್ಯಕ್ಷ ಮನ್ಸೂರ್ ಸಾಮಣಿಗೆ ಕಾರ್ಯಕ್ರಮ ನಿರೂಪಿಸಿದರು. ಹಳೆ ಕೋಟೆ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಕೆಎಂ ಕೆ ಮಂಜನಾಡಿ ಸ್ವಾಗತಿಸಿಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಲ್ತನೆ ಕೋಶಾಧಿಕಾರಿ ಇಬ್ರಾಹಿಂ ನಡುಪದವು ವಂದಿಸಿದರು.