ಸೆ.14,17: ಕೋರ್ಡೆಲ್ ಕುಲಶೇಖರ ಹೋಲಿ ಕ್ರಾಸ್ ಚರ್ಚ್ ನ 150ನೆ ವರ್ಷಾಚರಣೆ
ಮಂಗಳೂರು; ಕುಲಶೇಖರ ಹೋಲಿಕ್ರಾಸ್ ಚಚ್‌೯ ನ 'ಕೊರ್ಡೆಲ್’ ಧರ್ಮಕೇಂದ್ರ ವೆಂದು ಖ್ಯಾತಿ ಪಡೆದಿರುವ ಕುಲಶೇಖರ ಹೋಲಿ ಕ್ರಾಸ್ ಚಚ್‌೯ ನ 150 ವರ್ಷ ಪೂರೈಸುತ್ತಿದೆ. ಆ ಪ್ರಯುಕ್ತ ಸೆ.14 ಹಾಗೂ ಸೆ .17 ರಂದು ಈ ಸಂಭ್ರ ಮಾಚರಣೆಯನ್ನು ಕೃತಜ್ಞತಾ ಬಲಿಪೂಜೆಯೊಂದಿಗೆ ನೆರವೇರಿಸಲು ನಿಧ೯ರಿಸಲಾಗಿದೆ ಎಂದು ಚಚ್‌೯ನ ಪ್ರಧಾನ ಗುರುಗಳಾದ ವಂ.ಕ್ಲಿಫಡ್‌೯ ಫೆನಾ೯೦ಡಿಸ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸೆ.14 ರ೦ದು ಧರ್ಮಕೇಂದ್ರವು 150 ವಷ೯ಗಳ ಸಂಭ್ರಮವನ್ನು ಭಕ್ತಿಪೂರ್ವ ಕವಾಗಿ ಆಚರಿಸಲಿದೆ. ಈಗಾಗಲೇ ಯುವಜನರ ದಿನ,ದಂಪತಿಗಳ ದಿನ,ಶಿಕ್ಷಕರ ದಿನ,ಆರೋಗ್ಯ ಕಾರ್ಯಕರ್ತರ ದಿನವನ್ನು ಆಚರಿಸಲಾಗಿದೆ.ಸೆ.14 ರ೦ದು ಸ೦ಜೆ 5 .30 ಕ್ಕೆ ಮ೦ಗಳೂರು ಧಮ೯ಪ್ರಾ೦ತ್ಯದ ಪ್ರಧಾನ ಗುರುಗಳಾದ ಮೊ.ಮ್ಯಾಕ್ಸಿಮ್ ನೊರೊನ್ನಾ ಅವರು ಕೃತಜ್ಞತಾ ಬಲಿಪೂಜೆಯನ್ನು ಅಪಿ೯ಸುವರು. ಬಳಿಕ ಧರ್ಮಕೇಂದ್ರದಲ್ಲಿ ಸೇವೆ ನೀಡಿದ ಎಲ್ಲಾ ಮುಖ್ಯಸ್ಥರ, ಕಾರ್ಯದರ್ಶಿ ಗಳ ,ವಾಡ್‌೯ ಮುಖ್ಯಸ್ಥರ ಹಾಗೂ ಬೆನೆಫ್ಯಾಕ್ಟರ್,ಸಂಸ್ಥಾಪಕ ರುಗಳ ದಿನವನ್ನು ಆಚರಿಸಲಾಗುವುದು.ಸೆ .17 ರಂದು ಹಬ್ಭದ ಸಂಭ್ರಮ. ಸ೦ಜೆ 5 .30 ಕ್ಕೆ ಮಂಗಳೂರು ಧಮ೯ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ.ವಂ.ಡಾ. ಪೀಟರ್ ಪಾವ್ಲ್ ಸಲ್ದಾನಾ ಅವರು ಕೃತಜ್ಞತಾ ಬಲಿಪೂಜೆ ಅಪಿ೯ಸುವರು.
ಸೆಪ್ಟೆಂಬರ್ 14, 1873 ಕುಲಶೇಖರದ ಕ್ರೈಸ್ತ ಬಾಂಧವರಿಗೆ ಅಂತ ಸ್ಮರಣೀಯ ದಿನ .1865 ರಿಂದ 1877 ರವರೆಗೆ ಮಿಲಾಗ್ರಿಸ್ ಧರ್ಮಕೇಂದ್ರದ ಪ್ರಧಾನ ಗುರುಗಳಾಗಿದ್ದ ವಂದನೀಯ ಅಲೆಕ್ಸಾ೦ಡರ್ ದ್ಯೂಬ್ವಾ( ಫ್ರಾದ್ ಸ್ವಾಮಿ)ತನ್ನ ಧರ್ಮಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕುಲಶೇಖರವು ಒಂದು ಸ್ವತಂತ್ರ ಧರ್ಮಕೇಂದ್ರವಾಗಬೇಕು ಎಂಬ ಆಶಯ ದೊಂದಿಗೆ ಸೆಪ್ಟೆಂಬರ್ 14, 1873 ರ೦ದು ಇಲ್ಲಿ ದೇವಾಲಯಕ್ಕೆ ಶಿಲಾನ್ಯಾಸ ನೆರವೇರಿಸಿ, ಶಿಲುಬೆಯನ್ನು ನೆಟ್ಟು ಈ ದೇವಾಲಯವನ್ನು ಪವಿತ್ರ ಶಿಲುಬೆಗೆ ಸಮರ್ಪಿಸಿ, ಈ ಧರ್ಮಕೇಂದ್ರಕ್ಕೆ ಕೊರ್ಡೆಲ್’ ಎಂದು ನಾಮಕರಣ ಮಾಡಿಇಲ್ಲಿನ ಕೆಥೋಲಿಕ್ ಭಕ್ತಾದಿಗಳ ಕನಸು ನನಸಾಗಿಸುವಲ್ಲಿ ಮೊದಲ ಹೆಜ್ಜೆಯನ್ನಿಟ್ಟರು. ಈ ಚಾರಿತ್ರಿಕ ಘಟನೆಗೆ ಇದೀಗ150 ವಷ೯ಗಳ ಸಂಭ್ರಮ. ಧರ್ಮ ಕೇಂದ್ರದ ಪಾಲಕ ಯೇಸುಕ್ರಿಸ್ತರ ಪವಿತ್ರ ಶಿಲುಬೆ ಆಶ್ರಯದಲ್ಲಿ ಕಳೆದ 150 ವರುಷಗಳಲ್ಲಿಇಲ್ಲಿನ ಜನತೆ ಪಡೆದ ವರಗಳು ಅಪಾರ ಎಂದವರು ವಿವರಿಸಿದರು.
*ಆಡಳಿತ ಮಂಡಳಿ :-ಧರ್ಮ ಕೇಂದ್ರದ ಆಡಳಿತದಲ್ಲಿ ಧರ್ಮಗುರುಗಳ ಜತೆಗೆ ಕೇಂದ್ರದ ಭಕ್ತಾದಿಗಳು ತಮ್ಮ ಕೈ ಜೋಡಿಸುತ್ತಾರೆ. ಆರಂಭದಲ್ಲಿ ಆಡಳಿತ ಬೋರ್ಡ್ ಎಂಬ ಹೆಸರಿನಿಂದ ಕಾರ್ಯಾಚರಿಸುತ್ತಿದ್ದ ಮಂಡಳಿಯು 1972ರಿಂದ ಚರ್ಚ್ ಪಾಲನಾ ಮಂಡಳಿ ಎಂದುಮರುನಾಮಕರಣಗೊಂಡಿದೆ.ಪಾಲನಾ ಮಂಡಳಿಯಲ್ಲಿ ಪ್ರಸ್ತುತ 140 ಸದಸ್ಯರಿದ್ದು, ಅವರು 21 ಆಯೋಗಗಳಮೂಲಕ ವಿವಿಧ ಸೇವೆಯನ್ನು ನೀಡುತ್ತಿದ್ದಾರೆ ಎ೦ದರು.
ಸಂಘಟನೆಗಳು:-ಧರ್ಮಕೇಂದ್ರದ ಎಲ್ಲಾ ವಯೋಮಾನದ ಜನರಿಗೆ ತಮ್ಮ ಸೇವೆಯನ್ನು ನೀಡಲು ಹಾಗೂ ನಮ್ಮ ಪ್ರತಿಭೆಗಳನ್ನುಅನಾವರಣ ಮಾಡಲು ಇಲ್ಲಿ ಚರ್ಚ್ ಪಾಲನಾ ಪರಿಷದ್, ಬಲಿಪೀಠದ ಸೇವಕರು, ವೈಸಿಎಸ್, ಐಸಿವೈಎಂ, ಸಂತ ವಿನ್ಸೆಂಟ್ ಪಾವ್ಲ್ ಸಭೆ,ಆಸಿಸಿಯಾದ ಸಂತ ಫ್ರಾನ್ಸಿಸರ ಮೂರನೇ ಸಭೆ, ಲೀಜನ್ ಆಫ್ ಮೇರಿ, ಸ್ತ್ರೀ ಸಂಘಟನೆ, ಗಾಯನಮಂಡಳಿ ಮುಂತಾದ ಅನೇಕ ಸಂಘಟನೆಗಳು ಕಾರ್ಯಚರಿಸುತ್ತವೆ. ಜನರಿಗೆ ವಿವಿಧ ಸರಕಾರಿ ಯೋಜನೆಗಳ ಲಾಭಪಡೆಯಲು ಅನುಕೂಲವಾಗುವಂತೆ ಸಿಡಬ್ಲ್ಯೂಎ ಕಚೇರಿ ಸಹಕರಿಸುತ್ತದೆ ಎಂದವರು ಹೇಳಿದರು.
*ವಿದ್ಯಾಸಂಸ್ಥೆಗಳುಕುಲಶೇಖರದಲಿ, ಸಂತ ಜೋಸಫರ ಮೊದಲ ಪ್ರಾಥಮಿಕ ಶಾಲೆಯನ್ನು ಫ್ರಾದ್ ಸ್ವಾಮಿಯವರು ಆರಂಭಿಸಿದರು.ಅರಂಭದಲ್ಲಿ, ಇಲ್ಲಿ ಧರ್ಮೋಪದೇಶದ ಜತೆಗೆ ಓದು, ಬರಹ ಮತ್ತು ಗಣಿತವನ್ನು ಕಲಿಸುತ್ತಿದ್ದು,1883ರಿಂದ ಸರಕಾರದಿಂದ ಮಾನ್ಯತೆ ಪಡೆಯುವ ಶಿಕ್ಷಣ ನೀಡಲು ಆರಂಭಿಸಲಾಯಿತು ಅಂದಿನಿಂದ ಅನುದಾನಿತ ಸಂತ ಜೋಸಫರ ಹಿರಿಯ ಪ್ರಾಥಮಿಕ ಶಾಲೆಯ ಸಾವಿರಾರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ.ದ 2000ನೇ ಇಸವಿಯಲ್ಲಿ ಇಲ್ಲಿ ಸಂತ ಜೋಸೆಫರ ಅಂಗ್ಲ ಮಾಧ್ಯಮ ಪ್ರೌಢಶಾಲೆ ಆರಂಭಗೊಂಡಿದೆ ಈ ಎರಡು ಶಾಲೆಗಳು ಕೆಥೋಲಿಕ್ ವಿದ್ಯಾ ಬೋರ್ಡಿನ ಆಡಳಿತಕ್ಕೆ ಒಳಪಟ್ಟಿವೆ ಇದೇ ಪರಿಸರದಲ್ಲಿ ಬೆಥನಿ ವಿದ್ಯಾ ಸಂಸ್ಥೆಯ ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅನುದಾನಿತ ಸೆಕ್ರೆಡ್ ಹಾರ್ಟ್ ಪ್ರೌಢಶಾಲೆಗಳೂ ಉತ್ತಮ ಶಿಕ್ಷಣವನ್ನು ನೀಡುತ್ತವೆ, 1965 ರಲ್ಲಿ ಆರಂಭವಾದ ದ್ಯೂಬ್ವಾ ಸ್ಕೂಲ್ ಆಫ್ ಕಾಮರ್ಸ್‌ಹಲವರ ಬಾಳದೀವಿಗೆಯಾಗಿದೆ, ಇಲ್ಲಿ ಶೀಘ್ರಲಿಪಿ ಮತ್ತು ಟೈಪ್‌ರೈಟಿ೦ಗ್ ಕಲಿತ ಅನೇಕರು ಉತ್ತಮ ನೌಕರಿಯನ್ನು ವಡೆದಿದ್ದಾರೆ, ಅದರ ಜತೆಗೆ ಬ್ಯಾಂಕ್‌ವ್ಯವಹಾರ ವಾಣಿಜ್ಯ ಶಾಸ್ತ್ರ ಹಾಗೂ ಆಪೀಸ್‌ಕೆಲಸದ ತರಬೇತಿಯನ್ನೂ ನೀಡಲಾಗುತ್ತಿತ್ತು. ಈಗ ಈ ಸಂಸ್ಥೆ ಮುಚ್ಚಿದೆ.
ಧರ್ಮಕೇಂದ್ರದ ಆರಂಭದಿಂದಲೇ ಇಲ್ಲಿ ಬಡವರ ಅಭಿವೃದ್ಧಿಗಾಗಿ ಹಲವು ಯೋಜನೆಗಳು ಜಾರಿಯಲ್ಲಿವೆ, ವಸತಿ ನಿರ್ಮಾಣ (ಆವರ್ತ ನಿಧಿ) ಯೋಜನೆ ವಿದ್ಯಾನಿಧಿ ಆರೋಗ್ಯ ನಿಧಿ, ಫ್ರಾದ್ ಸ್ವಾಮಿ ನಿಧಿ ಮುಂತಾದ ಯೋಜನಗಳ ಮೂಲಕ ಬಡವರಿಗೆ ಸಹಾಯ ಮಾಡಲಾಗುತ್ತದೆ. ಈ ನಿಧಿಗಳಿಲ್ಲದೆ ಇನ್ನಿತರ ಮೂಲಗಳಿಂದ ಧನ ಸಹಾಯ ಮಾಡಲಾಗುತ್ತದೆ. ಸಂತ ವಿನ್ಸೆ೦ಟ್ ಪಾವ್ಲ್ ಸಭೆ ಬಡವರ ಏಳಿಗೆಗಾಗಿ ಶ್ರಮಿಸುತ್ತಿದೆ.ವಸತಿನಿರ್ಮಣ ಸಮಿತಿ ಮತ್ತು ಪ್ರಕಾಸ್ ಯೋಜನೆ ಮೂಲಕವೂ ಬಡಜನರಿಗೆ ವಸತಿಗಾಗಿ ಸಹಾಯ ಒದಗಿಸಲಾಗಿದೆ ಎಂದವರು ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ ಅನಿಲ್ ಡೇಸಾ,ಡಾ.ಲವಿನಾ ಡಿಮೆಲ್ಲೊ,ರೂತ್ ಕ್ಯಾಸ್ತಲಿನೊ, ಎಲಿಯಾಸ್ ಫೆರ್ನಾ೦ಡೀಸ್ ಉಪಸ್ಥಿತರಿದ್ದರು.