ಸೌತ್ ವೆಲ್ಫೇರ್ ಅಸೋಸಿಯೇಶನ್ ವಾರ್ಷಿಕ ಮಹಾಸಭೆ
ಮುಹಮ್ಮದ್ (ಗೋಲ್ಡ್ ಪ್ಯಾಲೇಸ್)
ಮಂಗಳೂರು, ಅ.26: ಜೆಪ್ಪುವಿನ ಸೌತ್ ವೆಲ್ಫೇರ್ ಅಸೋಸಿಯೇಶನ್ ಇದರ ಮಹಾಸಭೆಯು ಇತ್ತೀಚೆಗೆ ಕೆ.ಕೆ.ಸ್ಟೀಲ್ ಹತ್ತಿರದ ನೂತನ ಕಚೇರಿಯಲ್ಲಿ ಅಸೋಸಿಯೇಶನ್ ಅಧ್ಯಕ್ಷ ಮುಹಮ್ಮದ್ ಅಧ್ಯಕ್ಷತೆಯಲ್ಲಿ ಜರುಗಿತು.
ಸದಸ್ಯ ಅಬ್ದುಲ್ ವಹಾಬ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹಮೀದ್ ಜೆಪ್ಪು 23-24ನೇ ವಾರ್ಷಿಕ ವರದಿ ವಾಚಿಸಿದರು, ಇದೇ ವೇಳೆ 2024-25ನೇ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜೆ.ಮುಹಮ್ಮದ್ ಆಕೀಫ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಅಸೋಸಿಯೇಶನ್ ನೂತನ ಅಧ್ಯಕ್ಷರಾಗಿ ಮುಹಮ್ಮದ್ (ಗೋಲ್ಡ್ ಪ್ಯಾಲೇಸ್) ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಹಮೀದ್ ಪಟ್ನ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ವಹಾಬ್, ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಶರೀಫ್, ಕೋಶಾಧಿಕಾರಿಯಾಗಿ ಹಬೀಬ್ ರಹ್ಮಾನ್, ಗ್ಲೋಬಲ್ ಸಂಚಾಲಕರಾಗಿ ಶರೀಫ್ ಟಿ.ಎ., ಮುಸ್ತಫ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನವಾಝ್ ಜೆಪ್ಪು, ಸಮದ್, ಹಮೀದ್ ಜೆಪ್ಪು, ಜಾವೀದ್, ಸಮೀಮ್ ಹಾಗೂ ನಿಸಾರ್ ಆಯ್ಕೆಯಾದರು.
Next Story