ರಾಜ್ಯ ಮಟ್ಟದ ಮುಅಲ್ಲಿಂ ಮೆಹರ್ ಜಾನ್-23 ಪ್ರತಿಭಾ ಸಂಗಮ ಸ್ಪರ್ಧೆ
ಮಂಗಳೂರು: ಸುನ್ನೀ ಜಂ ಇಯ್ಯತುಲ್ ಮುಅಲ್ಲಿಮೀನ್ (ಎಸ್‌ಜೆಎಂ) ರಾಜ್ಯ ಸಮಿತಿ ಆಯೋಜಿಸಿದ್ದ ರಾಜ್ಯ ಮಟ್ಟದ ಮುಅಲ್ಲಿಂ ಮೆಹರ್ ಜಾನ್-23 ಪ್ರತಿಭಾ ಸಂಗಮ ಸ್ಪರ್ಧೆಯಲ್ಲಿ ಜೂನಿಯರ್ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಈಸ್ಟ್ ತಂಡ ಮತ್ತು ಸೀನಿಯರ್ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಕಾವಳಕಟ್ಟೆ ಖಾದಿಸಿಯ್ಯ ವಿದ್ಯಾ ಸಂಸ್ಥೆಯ ಕ್ಯಾಂಪಸ್‌ನಲ್ಲಿ ರೇಂಜ್, ರೆನ್, ಜಿಲ್ಲೆ ಹಾಗೂ ರಾಜ್ಯ ಘಟಕ, ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಜೂನಿಯರ್ ವಿಭಾಗದಲ್ಲಿ ಉಡುಪಿ ಜಿಲ್ಲೆ ಮತ್ತು ಸೀನಿಯರ್ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಈಸ್ಟ್ ತಂಡವು ದ್ವಿತೀಯ ಸ್ಥಾನ ಪಡೆಯಿತು.
ಜೂನಿಯರ್ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ ದ,ಕ. ಈಸ್ಟ್ ತಂಡದ ಮುಹಮ್ಮದ್ ಶರ್ವಾನಿ ರಝ್ವೀ ಉಜಿರೆ ಹಾಗೂ ಸೀನಿಯರ್ ವಿಭಾಗದಲ್ಲಿ ದ.ಕ. ವೆಸ್ಟ್ ತಂಡದ ಅಬ್ದುರ‌್ರಹ್ಮಾನ್ ಸಖಾಫಿ ಚಿಪ್ಪಾರ್ ಹೊರಹೊಮ್ಮಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಎಸ್‌ಜೆಎಂ ರಾಜ್ಯಾಧ್ಯಕ್ಷ ಅಲ್ ಹಾಜಿ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ವಹಿಸಿದ್ದರು.
ಸುನ್ನೀ ಮದ್ರಸ ಮಾನೇಜ್ ಮೆಂಟ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಅಸ್ಸಯ್ಯಿದ್ ಇಸ್ಮಾಯಿಲ್ ತಂಳ್ ಮದನಿ ಉಜಿರೆ ಸಭೆಯನ್ನು ಉದ್ಘಾಟಿಸಿದರು. ರಾಜ್ಯ ಜಂ ಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸ್‌ಪಿ ಹಂಝ ಸಖಾಫಿ ಬಂಟ್ವಾಳ, ಅಬ್ದುರ‌್ರಝಾಕ್ ಸಖಾಫಿ ಮಡಂತ್ಯಾರು ಸಹಿತ ಹಲವು ಗಣ್ಯರು ಶುಭ ಹಾರೈಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ .ಕೆ ಮುಹಿಯುದ್ದೀನ್ ಕಾಮಿಲ್ ಸಖಾಫಿ ಸುರಿಬೈಲು ಸ್ವಾಗತ ಭಾಷಣ ಮಾಡಿದರು. ಮುಅಲ್ಲಿಂ ಮೆಹರ್ ಜಾನ್ ನಿರ್ವಹಣಾ ಸಮಿತಿ ಚೆಯರ್ಮೆನ್ ಮುಫತ್ತಿಶ್ ಮುಹಮ್ಮದ್ ಹನೀಫ್ ಮಿಸ್ಬಾಹಿ ಪ್ರಾಸ್ತಾವಿಕ ಭಾಷಣ ಮಾಡಿದರು. ಜನರಲ್ ಕನ್ವೀನರ್ ಎನ್ ಎಂ ಶರೀಫ್ ಸಖಾಫಿ ನೆಕ್ಕಿಲ್ ವಂದಿಸಿದರು.
ವೇದಿಕೆಯಲ್ಲಿ ಸಯ್ಯಿದ್ ಸಾದಾತ್ ತಂಙಳ್ ಕರ್ವೇಲು, ರಾಜ್ಯ ಕೋಶಾಧಿಕಾರಿ ಪುಂಡೂರು ಇಬ್ರಾಹಿಂ ಸಖಾಫಿ, ರಾಜ್ಯ ನಾಯಕರಾದ ಓ.ಕೆ ಸಈದ್ ಮುಸ್ಲಿಯಾರ್, ಇಸ್ಮಾಯಿಲ್ ಸಅದಿ ಉರುಮಣೆ, ಇಬ್ರಾಹಿಂ ನಈಮಿ, ಮುಹಮ್ಮದ್ ಮದನಿ, ಹಮೀದ್ ಸಅದಿ, ಇಬ್ರಾಹಿಂ ಸಖಾಫಿ, ಅಝೀಝ್ ನೂರಾನಿ, ಉಮರ್ ಸಅದಿ, ಸಿರಾಜುದ್ದೀನ್ ಸಖಾಫಿ, ತೋಟಾಲ್ ಸಅದಿ, ರಝಾಕ್ ಖಾಸಿಮಿ, ಯಾಸೀನ್ ಸಖಾಫಿ, ಸೈಫುಲ್ಲಾ ಸಖಾಫಿ, ಅಮೀರ್ ಅಹ್ಸನಿ, ಸಿದ್ದೀಕ್ ಲತೀಫಿ, ಸಿದ್ದೀಕ್ ಮದನಿ ಹಾಗೂ ವಿದ್ಯಾಭ್ಯಾಸ ಬೋರ್ಡ್ ಮುಫತ್ತಿಶರು, ಸಂಸ್ಥೆಯ ಅಧ್ಯಾಪಕರು, ಆಡಳಿತ ಸಮಿತಿ ನಾಯಕರು ಮತ್ತು ಸ್ಥಳೀಯ ನಾಯಕರಾದ ಶರೀಫ್ ಪುಂಜಾಲಕಟ್ಟೆ, ಇಸ್ಮಾಯೀಲ್ ಹಾಜಿ, ಅಬ್ದುರ‌್ರಹ್ಮಾನ್, ಅಯ್ಯೂಬ್ ಮಹ್ಳರಿ, ಶಾಫೀ ಮದನಿ, ಶರೀಫ್ ಸಅದಿ, ಹಮೀದ್ ಮುಸ್ಲಿಯಾರ್, ಶರೀಫ್ ಮದನಿ ಮೊದಲಾದವರು ಉಪಸ್ಥಿತರಿದ್ದರು.