ಉಪ್ಪಿನಂಗಡಿ: ವಿದ್ಯಾರ್ಥಿಗೆ ಹಲ್ಲೆ; ಪ್ರಕರಣ ದಾಖಲು
ಉಪ್ಪಿನಂಗಡಿ: ನೆಲ್ಯಾಡಿಯ ಮದ್ರಸವೊಂದರ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪದನ್ವಯ ನ್ಯಾಯಲಯದ ನಿರ್ದೇಶನದ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.
ಜಿ.ಎಚ್. ಮುಹಮ್ಮದ್ ಸುಹೈಲ್(19) ವಿದ್ಯಾರ್ಥಿಯ ಮೇಲೆ ಸೆಪ್ಟೆಂಬರ್ 28 ರಂದು ಉಮ್ಮರಬ್ಬ (65), ಉಸ್ಮಾನ್ (25), ಅಬ್ದುಲ್ಲಾ (35) , ರಫೀಕ್(35) , ಶಕೀರ್(35), ಶಕಿಲ್(30) ಎಂಬವರು ನೆಲ್ಯಾಡಿ ಮಸೀದಿಯ ಮದ್ರಸ ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆಂದೂ, ಹಲ್ಲೆಗೊಳಗಾದವ ಗಾಯಗೊಂಡು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿರುವೆನೆಂದು ಆರೋಪಿಸಿ ಪುತ್ತೂರು ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿತ್ತು.
ಈ ಬಗ್ಗೆ ನ್ಯಾಯಾಲಯವು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುವಂತೆ ಉಪ್ಪಿನಂಗಡಿ ಪೊಲೀಸರಿಗೆ ನಿರ್ದೇಶನವನ್ನು ನೀಡಿತ್ತು. ಅದರಂತೆ ಶನಿವಾರ ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Next Story