ಸುಳ್ಯ: ಉಚಿತ ಆರೋಗ್ಯ ಮೇಳ, ಜಾಗೃತಿ ಅಭಿಯಾನ
600ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ

ಸುಳ್ಯ: ಹಿದಾಯ ಫೌಂಡೇಶನ್ ಮಂಗಳೂರು, ಮುಸ್ಲಿಂ ಯೂತ್ ಫೆಡರೇಶನ್ ಸುಳ್ಯ ಮತ್ತು ಯೇನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಲಕಟ್ಟೆ ಸಂಯುಕ್ತ ಆಶ್ರಯದಲ್ಲಿ ಸುಳ್ಯ ಗ್ರೀನ್ ವ್ಯೂ ಶಾಲಾ ಆವರಣದಲ್ಲಿ ಬೃಹತ್ ಉಚಿತ ಆರೋಗ್ಯ ಮೇಳ ಆಯೋಜಿಸಲಾಯಿತು.
ಮೇಳವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ಉದ್ಘಾಟಿಸಿ, ಇಂತಹ ಆರೋಗ್ಯ ತಪಾಸಣೆ ಶಿಬಿರ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳಿಂದ ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡುತ್ತದೆ ಎಂದರು.
ಅಧ್ಯಕ್ಷತೆಯನ್ನು ಹಿದಾಯ ಫೌಂಡೇಶನ್ ಅಧ್ಯಕ್ಷ ಹನೀಫ್ ಹಾಜಿ ಗೊಳ್ತಮಜಲು ವಹಿಸಿ ಮಾತನಾಡಿ, ಹಿದಾಯ ಫೌಂಡೇಶನ್ ಜಿಲ್ಲೆಯಾದ್ಯಂತ ಸ್ಥಳೀಯ ಸಂಘ ಸಂಸ್ಥೆ ಗಳ ಸಹಕಾರದೊಂದಿಗೆ ಇಂತಹ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿ ಉಚಿತ ಔಷದಿ, ಕನ್ನಡಕ ವಿತರಣೆ, ವಿಶೇಷವಾಗಿ ಮಹಿಳೆಯರ ಆರೋಗ್ಯ ತಪಾಸಣೆಗೆ ಸುಸಜ್ಜಿತ ಆಧುನಿಕ ವ್ಯವಸ್ಥೆಯ ಬಸ್ಸಿನಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ, ಸಾಂದೀಪನಿ ವಿಶೇಷ ಮಕ್ಕಳ ಶಾಲೆಯ ಸ್ಥಾಪಕ ಲಯನ್ ಎಂ. ಬಿ. ಸದಾಶಿವ, ಶಿಬಿರದ ಮುಖ್ಯಸ್ಥೆ ಡಾ. ಅಶ್ವಿನಿ ಶೆಟ್ಟಿ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ಎಪಿಎಂಸಿ ಮಾಜಿ ನಿರ್ದೇಶಕ ಆದಂ ಹಾಜಿ ಕಮ್ಮಾಡಿ, ಅನ್ಸಾರಿಯ ಎಜುಕೇಶನ್ ಟ್ರಸ್ಟ್ ಪದಾಧಿಕಾರಿಗಳಾದ ಹಾಜಿ ಅಬ್ದುಲ್ ಮಜೀದ್ ಜನತಾ, ಅಬ್ದುಲ್ ಲತೀಫ್ ಹರ್ಲಡ್ಕ, ಎಸ್.ಎಂ. ಹಮೀದ್, ಅಲ್ಪ ಸಂಖ್ಯಾತ ಸಹಕಾರಿ ಸಂಘದ ಅಧ್ಯಕ್ಷ ಐ. ಕೆ. ಮಹಮ್ಮದ್ ಇಕ್ಬಾಲ್ ಎಲಿಮಲೆ, ಗಾಂಧಿನಗರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಕೆ. ಎಂ. ಮಹಮ್ಮದ್, ಕೆಎಂಎಸ್, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಜನತಾ, ಹಿದಾಯ ಫೌಂಡೇಶನ್ ಉಪಾಧ್ಯಕ್ಷರುಗಳಾದ ಮಕ್ಬೂಲ್ ಅಹ್ಮದ್, ಆಸಿಫ್ ಇಕ್ಬಾಲ್, ಹೆಲ್ತ್ ಕ್ಯಾಂಪ್ ಇನ್ ಚಾರ್ಜ್ ಹಕೀಮ್ ಕಲಾಯಿ, ಕಾರ್ಯದರ್ಶಿ ಅಡ್ವೋಕೇಟ್ ಶೇಕ್ ಇಸಾಕ್, ಯೂತ್ ವಿಂಗ್ ಅಧ್ಯಕ್ಷ ಖಲೀಲ್, ಸದಸ್ಯರುಗಳಾದ ಬಶೀರ್ ವಗ್ಗ, ರಝಾಕ್ ಯೇನೆಪೋಯ ಕುಪ್ಪೆಪದವು, ಹಮೀದ್ ಕಲ್ಲಡ್ಕ, ಇಬ್ರಾಹಿಂ ಪರ್ಲಿಯಾ, ಮುಸ್ಲಿಂ ಯೂತ್ ಫೆಡರೇಶನ್ ಪದಾಧಿಕಾರಿಗಳಾದ ಕೆ. ಎಸ್. ಉಮ್ಮರ್, ಶರೀಫ್ ಕಂಠಿ, ಉನೈಸ್ ಪೆರಾಜೆ, ಖಲಂದರ್ ಎಲಿಮಲೆ, ರಶೀದ್ ಜಟ್ಟಿಪ್ಪಳ್ಳ, ಸಿದ್ದೀಕ್ ಕೊಕ್ಕೋ ಮೊದಲಾದವರು ಉಪಸ್ಥಿತರಿದ್ದರು.
ಮೀಫ್ ಉಪಾಧ್ಯಕ್ಷ ಕೆ.ಎಂ. ಮುಸ್ತಫಾ ಸ್ವಾಗತಿಸಿ, ಗ್ರೀನ್ ವ್ಯೂ ಮುಖ್ಯ ಶಿಕ್ಷಕ ಇಲ್ಯಾಸ್ ವಂದಿಸಿದರು.
ಅರೋಗ್ಯ ಮೇಳದ ವಿಶೇಷತೆಗಳು
ಉಚಿತ ಕಣ್ಣಿನ ಪರೀಕ್ಷೆ, ಉಚಿತ ಕನ್ನಡಕ ವಿತರಣೆ, ಶಸ್ತ್ರ ಚಿಕಿತ್ಸೆ ಅಗತ್ಯವುಳ್ಳವರಿಗೆ ಉಚಿತ ವ್ಯವಸ್ಥೆ, ದಂತ ತಪಾಸಣೆಗೆ ಸರ್ವ ಸನ್ನದ್ಧ ಬಸ್ ನಲ್ಲಿ ಚಿಕಿತ್ಸೆ.
ಮಹಿಳೆಯರಿಗೆ ಅತ್ಯಾಧುನಿಕ ಸೌಲಭ್ಯದ ಬಸ್ ನಲ್ಲಿ ನುರಿತ ತಜ್ಞ ವೈದ್ಯರಿಂದ ತಪಾಸಣೆ, ಡಾ. ಸುಹಾನ ಮಂಗಳೂರು ಅವರಿಂದ ವಿಶೇಷ ಮಹಿಳಾ ಆರೋಗ್ಯ ಜಾಗೃತಿ ಅಭಿಯಾನ ಉಪನ್ಯಾಸ, ಉಚಿತ ಬಿ. ಪಿ, ಶುಗರ್ ಟೆಸ್ಟ್ ನೊಂದಿಗೆ ಜನರಲ್ ಟೆಸ್ಟ್, ಮೂಳೆ ತಪಾಸಣೆ ನಡೆಸಲಾಯಿತು.
ಮಕ್ಕಳ ತಜ್ಞ ರಿಂದ ಮಕ್ಕಳಿಗೆ ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡಲಾಯಿತು.