ಸುನ್ನೀ ಕೋ ಓರ್ಡಿನೇಶನ್ ಕಮಿಟಿ ತಲಪಾಡಿ ರೇಂಜ್ ವತಿಯಿಂದ ಬೃಹತ್ ಮಿಲಾದ್ ಜಾಥ

ಉಳ್ಳಾಲ: ತಲಪಾಡಿ ಸುನ್ನೀ ಕೋ ಓರ್ಡಿನೇಶನ್ ಕಮಿಟಿ ತಲಪಾಡಿ ರೇಂಜ್ ಹಾಗೂ ವಿವಿಧ ಮದರಸ ಮತ್ತು ವಿವಿಧ ಸುನ್ನೀ ಸಂಘಟನಾ ವತಿಯಿಂದ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಂ ರವರ ಜನ್ಮ ದಿನದ ಅಂಗವಾಗಿ ಬೃಹತ್ ಮಿಲಾದ್ ಜಾಥ ಅಕ್ಟೋಬರ್ 28 ಗುರುವಾರ ಜರಗಿತು.
ಕೆ.ಪಿ ಹುಸೈನ್ ಸಅದಿ ಕೆ ಸಿ ರೋಡ್ ಸಂದೇಶ ಭಾಷಣ ಮಾಡಿದರು. ಉಚ್ಚಿಲ ಮಸೀದಿ ಖತೀಬರಾದ ಇಬ್ರಾಹಿಮ್ ಫೈಝಿ ದುವಾ ನೆರವೇರಿಸಿದರು. ಜಾಥಾದಲ್ಲಿ ಡಾ' ಎಮ್ಮೆಸ್ಸೆಮ್ ಅಬ್ದುಲ್ ರ್ರಶೀದ್ ಝೈನಿ, ಮುನೀರ್ ಸಖಾಫಿ ಕೆ.ಸಿ ರೋಡ್, ಹಾಫಿಲ್ ನಝೀರ್ ಅಹ್ಮದ್ ಸಖಾಫಿ ತಲಪಾಡಿ,ಬಶೀರ್ ಆಹ್ಸನಿ ಪಿಲಿಕುರ್, ಅಬ್ಬಾಸ್ ಹಾಜಿ ಕೆ.ಸಿ ರೋಡ್, ಇಸ್ಮಾಯಿಲ್ ಹಾಜಿ ಕೊಪ್ಪಳ, ಬಾವ ಹಾಜಿ ಪಿಲಿಕೂರ್, ಪೆರಿಬೈಲ್ ಅಬ್ಬಾಸ್ ಹಾಜಿ, ಮುಸ್ತಫಾ ಝುಹ್ರಿ, ಮುಹಮ್ಮದ್ ಮದನಿ, ಕೆ.ಸಿ ರೋಡ್ ಅಬ್ದುಲ್ಲ ಮದನಿ ಹಾಗೂ ಸುನ್ನೀ ಸಂಘಟನಾ ನಾಯಕರು ವಿವಿಧ ಮದರಸ ಮಕ್ಕಳು ಉಪಸ್ಥಿತರಿದ್ದರು.
ಬಿಲಾಲ್ ಜುಮಾ ಮಸ್ಜಿದ್ ತಲಪಾಡಿ ಯಿಂದ ಹೊರಟು 407 ಜುಮಾ ಮಸೀದಿ ವಠಾರದಲ್ಲಿ ಅರಬಿ ಶಹೀದ್ ವಲಿಯವರ ಮಖ್ಬರ ಝಿಯಾರತ್ ನೊಂದಿಗೆ ಸಮಾಪ್ತಿಗೊಂಡಿತು.