ಸುನ್ನಿ ಜಂಇಯ್ಯತುಲ್ ಉಲಮಾ ಉಳ್ಳಾಲ ಝೋನ್ ವಾರ್ಷಿಕ ಮಹಾಸಭೆ
ಉಳ್ಳಾಲ: ಸುನ್ನಿ ಜಂಇಯ್ಯತುಲ್ ಉಲಮಾ ಉಳ್ಳಾಲ ಝೋನ್ ಇದರ ವಾರ್ಷಿಕ ಮಹಾಸಭೆ ಝೋನ್ ಅಧ್ಯಕ್ಷ ಶಿಹಾಬುದ್ದೀನ್ ಕಾಮಿಲ್ ಸಖಾಫಿ ಉಳ್ಳಾಲ ರವರ ಅಧ್ಯಕ್ಷತೆಯಲ್ಲಿ ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಮದನಿ ಹಾಲ್ ನಲ್ಲಿ ಜರುಗಿತು.
ಮುಕ್ಕಚೇರಿ ಅಬೂಬಕರ್ ಸಿದ್ದೀಖ್ ಜುಮಾ ಮಸ್ಜಿದ್ ನಮುದರ್ರಿಸ್ ಅಬ್ಬಾಸ್ ಮದನಿ ದುಆ ನೆರವೇರಿಸಿದರು.
ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬ್ ಇಬ್ರಾಹಿಂ ಸಅದಿ ಮಾಣಿ ಉದ್ಘಾಟಿಸಿದರು. ಝೋನ್ ಅಧ್ಯಕ್ಷ ಶಿಹಾಬುದ್ದೀನ್ ಕಾಮಿಲ್ ಸಖಾಫಿ ಉಳ್ಳಾಲ ತರಗತಿ ಮಂಡಿಸಿದರು. ವೀಕ್ಷಕರಾಗಿ ಆಗಮಿಸಿದ ಸುನ್ನೀ ಜಂಇಯ್ಯತುಲ್ ಉಲಮಾ ರಾಜ್ಯ ಕಾರ್ಯದರ್ಶಿ ತೋಕೆ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ಜಂಇಯ್ಯತುಲ್ ಉಲಮಾ ಸದಸ್ಯತನದ ಅರ್ಹತೆಯ ಬಗ್ಗೆ ವಿವರಿಸಿದರು. ಸಭೆಯಲ್ಲಿ ವಾರ್ಷಿಕ ವರದಿ ಹಾಗು ಲೆಕ್ಕಪತ್ರವನ್ನು ಮಂಡಿಸಿ ಅಂಗೀಕರಿಸಲಾಯಿತು. ಬಳಿಕ ನೂತನ ಸಮಿತಿ ರಚನಾ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಶಿಹಾಬುದ್ದೀನ್ ಕಾಮಿಲ್ ಸಖಾಫಿ ಉಳ್ಳಾಲ, ಪ್ರಧಾನ ಕಾರ್ಯದರ್ಶಿಯಾಗಿ ಮುನೀರ್ ಸಖಾಫಿ ಸಾಲೆತ್ತೂರು, ಕೋಶಾಧಿಕಾರಿಯಾಗಿ ವಿ ಎ ಮುಹಮ್ಮದ್ ಸಖಾಫಿ ವಳವೂರ್ ಪುನರಾಯ್ಕೆಯಾದರು.
ಉಪಾಧ್ಯಕ್ಷರುಗಳಾಗಿ ಶರೀಫ್ ಬಾಖವಿ ಮುಕ್ಕಚೇರಿ, ಶರೀಫ್ ಸಅದಿ ಕಲ್ಲಾಪು ಮತ್ತು ಬಶೀರ್ ಅಹ್ಸನಿ ತೋಡಾರ್, ಜೊತೆ ಕಾರ್ಯದರ್ಶಿಗಳಾಗಿ ಯೂನುಸ್ ಇಮ್ದಾದಿ ಅಲ್ ಫುರ್ಖಾನಿ, ಪೂಡಲ್ ಮುಹಮ್ಮದ್ ಮದನಿ , ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಹಾಗೂ ಹದಿನಾರು ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು.