ಸುರತ್ಕಲ್: ವಿಧಾನ ಪರಿಷತ್ ಸರಕಾರಿ ಭರವಸೆಗಳ ಸಮಿತಿಯಿಂದ ರಸ್ತೆ ಅಗಲೀಕರಣ ಪರಿಶೀಲನೆ
ಸಂಸ್ಥೆಯ ಸಿಬ್ಬಂದಿ ಮತ್ತು ಪತ್ರಕರ್ತರ ನಡುವೆ ವಾಕ್ಸಮರ
ಸುರತ್ಕಲ್, ಸೆ.7: ವಿಧಾನ ಪರಿಷತ್ ನ ಸರಕಾರಿ ಭರವಸೆಗಳ ಸಮಿತಿಯು ಗುರುವಾರ ಮಂಗಳೂರು ನಗರದ ಒ.ಡಿ.ಸಿ ರಸ್ತೆ ಅಗಲೀಕರಣ ಪರಿಶೀಲನೆ, ಹಿಂದೂಸ್ತಾನ್ ಪೆಟ್ರೊಲಿಯಂ ಕಾರ್ಪೊರೇಷನ್ ಲಿಮಿಟೆಡ್ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕಾರ್ಯಕ್ರಮ ಸಂಬಂಧ ಸಮಿತಿಯು ತಣ್ಣೀರುಬಾವಿ ಸಮೀಪದ ಒಡಿಸಿ ರಸ್ತೆ ಪರಿಶೀಲನೆಗೆ ತೆರಳಿತ್ತು. ಈ ವೇಳೆ ಮಾಧ್ಯಮ ಸಮಿತಿಯ ಸದಸ್ಯೆ ಡಾ. ತೇಜಸ್ವಿನಿ ಗೌಡ ವೀಡಿಯೊ ಚಿತ್ರೀಕರಿಸಲು ಮತ್ತು ಫೊಟೊಗಳನ್ನು ಸೆರೆ ಹಿಡಿಯು ತ್ತಿದ್ದ ಪತ್ರಕರ್ತರಿಗೆ ಗಧರಿಸಿದ ಘಟನೆ ನಡೆಯಿತು. ಆಗ ಸಮಿತಿಯ ಅಧ್ಯಕ್ಷ ಬಿ.ಎಂ. ಫಾರೂಕ್ ಅವರು ಪತ್ರಕರ್ತರನ್ನು ಸಮಾಧಾನಿಸಿದರು.
ಬಳಿಕ ನಿಯೋಗವು ಸುರತ್ಕಲ್ ನಲ್ಲಿರುವ ಹಿಂದೂಸ್ತಾನ್ ಪೆಟ್ರೊಲಿಯಂ ಕಾರ್ಪೊರೇಷನ್ ಲಿಮಿಟೆಡ್ ಗೆ ಭೇಟಿ ನೀಡಿತು. ಬಳಿಕ ಸಭೆ ನಡೆಯಿತು. ಈ ವೇಳೆ ಸಂಸ್ಥೆಗೆ ಪ್ರವೇಶಿಸುತ್ತಿದಂತೆ ಪತ್ರಕರ್ತರನ್ನು ಸಭೆಯಿಂದ ದೂರ ಇಡಲಾಯಿತು.
ಈ ವೇಳೆ ಸಂಸ್ಥೆಯ ಸಿಬ್ಬಂದಿ ಮತ್ತು ಪತ್ರಕರ್ತರ ನಡುವೆ ವಾಕ್ಸಮರ ನಡೆಯಿತು. ಸಿಬ್ಬಂದಿಯ ಕಣ್ಣು ತಪ್ಪಿಸಿ ಸಭೆಗೆ ಹಾಜರಾದ ಪತ್ರಕರ್ತರನ್ನು ಡಾ. ತೇಜಸಸ್ವಿನಿ ಗೌಡ ಅವರು ಮತ್ತೆ ಪ್ರಶ್ನಿಸಿದ್ದು, ಬಳಿಕ ಅವರನ್ನೂ ಹೊರಗೆ ಕಳುಹಿಸಿದ ಘಟನೆಯೂ ನಡೆಯಿತು.
ಸಭೆಯ ಬಳಿಕ ಸಭಾಂಗಣದಿಂದ ಹೊರ ಬಂದ ವೇಳೆ ಪತ್ರಕರ್ತರು ವಿಧಾನ ಪರಿಷತ್ ನ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷ ಬಿ.ಎಂ. ಫಾರೂಕ್ ಅವರನ್ನು ತರಾಟೆಗೆ ತೆಗೆದುಕೊಂಡು, "ಸಭೆ , ಕಾರ್ಯಕ್ರಮಕ್ಕೆ ಹಾಜರಾಗಲು ಪತ್ರಕರ್ತರಿಗೆ ಅವಕಾಶ ಇಲ್ಲ ಎಂದ ಮೇಲೆ ಪತ್ರಕರ್ತರನ್ನು ಕರೆ ತಂದಿರುವುದು ಯಾಕೆ ಎಂದು ಪ್ರಶ್ನಸಿದರು. ಈ ವೇಳೆ ಪತ್ರಕರ್ತರ ಬೆನ್ನು ತಟ್ಟುತ್ತಾ ಮತ್ತೆ ಅಧ್ಯಕ್ಷರು ಸಮಾಧಾನ ಪಡಿಸಲು ಯತ್ನಿಸಿದ ಘಟನೆಯೂ ನಡೆಯಿತು.
ಬಳಿಕ ಹಿಂದೂಸ್ತಾನ್ ಪೆಟ್ರೊಲಿಯಂ ಕಾರ್ಪೊರೇಷನ್ ಲಿಮಿಟೆಡ್ ನ ನೂತನ ಯೋಜನೆಯ ವೀಕ್ಷಣೆಗೆ ತೆರಳುವ ಸಂದರ್ಭವೂ ಸುರಕ್ಷತೆಯ ಕಾರಣ ಹೇಳಿ ಪತ್ರಕರ್ತರನ್ನು ಮತ್ತೆ ಹೊರಗೆ ಇಟ್ಟು, ಅಧಿಕಾರಿಗಳು ಮಾತ್ರ ವೀಕ್ಷಣೆಗೆ ತೆರಳಿದ ಘಟನೆಯೂ ನಡೆಯಿತು.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯ ಪಿ.ಎಚ್. ಪೂಜಾರ್, ಎಸ್. ರುದ್ರೇಗೌಡ, , ಡಾ. ತಳವಾರ್ ಸಾಬಣ್ಣ ಹಾಗೂ ತಿಪ್ಪಣ್ಣಪ್ಪ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಹಣಾಧಿಕಾರಿ ಡಾ. ಆನಂದ್ ಕೆ., ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಗೋಕುಲ್ ದಾಸ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.