ಸುರಿಬೈಲ್: ದಾರುಲ್ ಅಶ್ ಅರಿಯ ಸಿಲ್ವರ್ ಜ್ಯುಬಿಲಿ ಸಂಭ್ರಮ ಉದ್ಘಾಟನೆ
ಬಂಟ್ವಾಳ: ಸುರಿಬೈಲ್ ದಾರುಲ್ ಅಶ್ ಅರಿಯ ಎಜುಕೇSನಲ್ ಸೆಂಟರ್ ಇದರ ಸಿಲ್ವರ್ ಜ್ಯುಬಿಲಿ ನ. 1, 2 ಮತ್ತು 3ರಂದು ನಡೆಯಲಿದೆ. ಈ ಸಂಭ್ರಮದ ಉದ್ಘಾಟನಾ ಸಮಾರಂಭವು ಬಿ.ಸಿ.ರೋಡಿನ ಲಯನ್ಸ್ ಭವನದಲ್ಲಿ ನಡೆಯಿತು.
ಶೈಖುನಾ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿದರು. ಶೈಖುನಾ ವಾಲೆಮುಂಡೇವು ಉಸ್ತಾದ್ ಅಧ್ಯಕ್ಷತೆ ವಹಿಸಿದ್ದರು,
ಸೈಯದ್ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟಕಲ್ ದುಆಗೈದರು. ಸಂಸ್ಥೆಯ ಮ್ಯಾನೇಜರ್ ಸಿ.ಎಚ್.ಮುಹಮ್ಮದ್ ಅಲಿ ಸಖಾಫಿ ಪ್ರಸ್ತಾವನೆಗೈದರು.
ಡಾ.ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ 'ಸಮಾನ ನಾಗರಿಕ ಸಂಹಿತೆ' ಎಂಬ ವಿಷಯ ಮಂಡಿಸಿದರು.
ಶೈಖುನಾ ಅಬೂಬಕರ್ ಮುಸ್ಲಿಯಾರ್ ಬೊಳ್ಮಾರ್, ಅಬ್ದುಲ್ ಹಮೀದ್ ಲತೀಫಿ ಸೇರಾಜೆ, ಅಬೂ ಸ್ವಾಲಿಹ್ ಮದನಿ ಆಲಡ್ಕ, ಕೆ.ಕೆ.ಎಂಕಕಾಮಿಲ್ ಸಖಾಫಿ, ಸಿಂಗಾರಿ ಸುಲೈಮಾನ್ ಹಾಜಿ ನಾರ್ಶ, ಎಂ.ಎಸ್.ಮುಹಮ್ಮದ್, ಅಶ್ರಫ್ ಹಾಜಿ ಅಡ್ಯಾರ್, ಇಬ್ರಾಹೀಂ ಮದನಿ ದುಬೈ, ಅಬ್ದುರ್ರಝಾಕ್ ಹಾಜಿ ಅಬುಧಾಬಿ, ಮುಹಮ್ಮದ್ ಅಲಿ ಹಾಜಿ ಬಜ್ಪೆ, ಮುತ್ತಲಿಬ್ ಹಾಜಿ ನಾರ್ಶ, ಹಾರಿಸ್ ಸುರಿಬೈಲ್, ಅಶ್ರಫ್ ಸಅದಿ ಮಲ್ಲೂರು, ಖಾಸಿಂ ಮದನಿ ಕರಾಯ, ಇಸ್ಹಾಕ್ ಝುಹ್ರಿ, ಅಬೂಬಕರ್ ಸಿದ್ದೀಕ್ ಅಳಿಕೆ, ಅಬ್ದುಲ್ ಖಾದರ್ ಸಖಾಫಿ ಅಲ್ ಮದೀನಾ, ಇಬ್ರಾಹೀಂ ಬ್ರೈಟ್ ಅಬುಧಾಬಿ, ಅಬ್ದುಲ್ಲಾ ಮುಸ್ಲಿಯಾರ್ ದುಬೈ, ಹನೀಫ್ ಕುಲ್ಯಾರ್ ಬರ್ ದುಬೈ, ಅನ್ವರ್ ಹಾಜಿ ಗೂಡಿನಬಳಿ, ಮಹ್ಮೂದ್ ಸಅದಿ ಬಾರೆಬೆಟ್ಟು, ಅಶ್ರಫ್ ಸಖಾಫಿ ಆಲಡ್ಕ, ಇಬ್ರಾಹೀಂ ಸಖಾಫಿ ಸೆರ್ಕಳ, ಅಕ್ಬರ್ ಅಲಿ ಮದನಿ ಮಂಚಿಬೈಲು, ಅಬ್ದುಲ್ ಹಕೀಂ ಹನೀಫ್ ನಿಡಿಗಲ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ದಾರುಲ್ ಅಶ್ಅರಿಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಇಬ್ರಾಹಿಂ ಖಲೀಲ್ ಮಾಲಿಕಿ ಸ್ವಾಗತಿಸಿದರು. ಅಶ್ರಫ್ ಇಮ್ದಾದಿ ಬಾಳೆಪುಣಿ ವಂದಿಸಿದರು.