ಸುಶೀಲಾ ಭಟ್ನಗರ ನಿಧನ
ಉಳ್ಳಾಲ, ಜು.31: ತೊಕ್ಕೊಟ್ಟು ಸಮೀಪದ ಭಟ್ನಗರ ನಿವಾಸಿ, ದಿ.ಶಕ್ತಿ ಶೇಖರ್ ಭಟ್ನಗರ ಅವರ ಪತ್ನಿ ಸುಶೀಲಾ ಭಟ್ನಗರ(80) ಅಲ್ಪಕಾಲದ ಅನಾರೋಗ್ಯದಿಂದ ರವಿವಾರ ನಿಧನರಾದರು.
ಮೃತರು ಪುತ್ರ ಸಾಮಾಜಿಕ ಮತ್ತು ರಾಜಕೀಯ ಮುಖಂಡ ಸುರೇಶ್ ಭಟ್ನಗರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ವಿಧಾನಸಭಾ ಅಧ್ಯಕ್ಷ ಯುಟಿ ಖಾದರ್, ಕಾಂಗ್ರೆಸ್ , ಬಿಜೆಪಿ, ಜೆಡಿಎಸ್ ಸಹಿತ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಾಮಾಜಿಕ, ಧಾರ್ಮಿಕ ಸಂಘಟನೆಗಳ ನಾಯಕರು ಭೇಟಿ ನೀಡಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.
Next Story