ಕ್ರೀಡೆ ಸೌಹಾರ್ದತೆಯ ಸಂಕೇತ: ಶೌಕತ್ ಆಲಿ
ಕೊಣಾಜೆ: ಅಸೈಗೋಳಿ ಯುವಕ ಮಂಡಲ ಮತ್ತು ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ನಡೆಯಲಿರುವ 35ನೇ ಮೊಸರು ಕುಡಿಕೆ ಉತ್ಸವದ ಅಂಗವಾಗಿ ಸಾರ್ವಜನಿಕ ಕ್ರೀಡಾಕೂಟವು ಅಸೈಗೋಳಿ ಯುವಕ ಮಂಡಲದ ಕೇಂದ್ರ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶೌಕತ್ ಆಲಿ ಅವರು ಕ್ರೀಡೆಯು ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದೆ. ಮುಖ್ಯವಾಗಿ ಸೌಹಾರ್ದ ತೆ ಸಂಕೇತ ಕೂಡ ಹೌದು ಎಂದು ಅಭಿಪ್ರಾಯ ಪಟ್ಟರು.
ಕ್ರೀಡೋತ್ಸವವನ್ನು ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ್ ಅಂಚನ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಉದ್ಯಮಿಯಾದ ಇಕ್ಬಾಲ್ ಸಾಮಾನಿಗೆ , ಸಮಾಜ ಸೇವಕರಾದ ಚಂದ್ರಶೇಖರ್ ಶೆಟ್ಟಿ ಮಂಟಮೆ, ,ಕೋಶಾಧಿಕಾರಿ ಸುಧಾಕರ್ ಭಟ್ ಉಪಾಧ್ಯಕ್ಷರುಗಳಾದ ಪದ್ಮನಾಭಗಟ್ಟಿ ,ವಿಶ್ವನಾಥ ನಾಯ್ಕ್ ಪಿ, ದೈಹಿಕ ಶಿಕ್ಷಣ ಶಿಕ್ಷಕರಾದ ಪುರುಷೋತ್ತಮ್, ಮಂಜು,ಗಂಗಾಧರ್ ಕಲಾಯಿ, ಕೃಷ್ಣಪ್ಪ ಎನ್ ಕೊಣಾಜೆ, ಗಣೇಶ್ ಸೈಟ್ ಮುಂತಾದವರು ಉಪಸ್ಥಿತರಿದ್ದರು.
ಸಮಿತಿಯ ಗೌರವ ಅಧ್ಯಕ್ಷರು ಸಂತೋಷ್ ಕುಮಾರ್ ಶೆಟ್ಟಿ ಫುಲ್ಲು ಪ್ರಸ್ತಾವನೆ ಗೈದರು ಗೌರವ ಸಲಹೆಗಾರರಾದ ಆನಂದ ಕೆ ಅಸೈಗೋಳಿ ಸ್ವಾಗತಿಸಿದರು,ಪ್ರಧಾನ ಕಾರ್ಯದರ್ಶಿ ತ್ಯಾಗಮ್ ಹರೇಕಳ ನಿರೂಪಿಸಿದರು ಕ್ರೀಡಾ ಸಂಚಾಲಕರು ರಾಧಾಕೃಷ್ಣ ರೈ ವಂದಿಸಿದರು