ಎಸ್.ವೈ.ಎಸ್. ಮಂಗಳೂರು ಸರ್ಕಲ್ ವಾರ್ಷಿಕ ಮಹಾಸಭೆ

ಮಂಗಳೂರು, ಫೆ.20: ಕರ್ನಾಟಕ ಎಸ್ವೈಎಸ್ ಇದರ ಮಂಗಳೂರು ಸರ್ಕಲ್ ವಾರ್ಷಿಕ ಮಹಾಸಭೆಯು ಫೆ.19ರಂದು ನಗರದ ಜಮೀಯ್ಯತುಲ್ ಉಲಮಾ ಸಭಾಂಗಣದಲ್ಲಿ ಜರುಗಿತು. ಸಭೆಯನ್ನು ರಫೀಕ್ ಮದನಿ ಉದ್ಘಾಟಿಸಿದರು. ಸೈಯದ್ ಇಸ್ಹಾಕ್ ತಂಙಳ್ ದುಆಗೈದರು. ಕೆ.ಸಿ.ಸುಲೈಮಾನ್ ಅಲ್ ಫುರ್ಖಾನಿ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು.
ಇಕ್ಬಾಲ್ ಅಹ್ಸನಿ
ಜಬ್ಬಾರ್ ಕಣ್ಣೂರು ಮುಖ್ಯ ಭಾಷಣ ಮಾಡಿದರು. ಜಿಲ್ಲಾ ನಾಯಕರಾದ ಹಸನ್ ಪಾಂಡೇಶ್ವರ, ಉಪಸ್ಥಿತರಿದ್ದರು. ಇದೇ ವೇಳೆ ನೂತನ ಸಾಲಿಗೆ(2025 - 2026) ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಇಕ್ಬಾಲ್ ಅಹ್ಸನಿ, ಪ್ರದಾನ ಕಾರ್ಯದರ್ಶಿಯಾಗಿ ರಶೀದ್ ಐಬಿಎಂ, ಕೋಶಾಧಿಕಾರಿಯಾಗಿ ಇಸ್ಮಾಯೀಲ್ ಬೆಂಗರೆ, ಉಪಾಧ್ಯಕ್ಷರಾಗಿ ಆಸಿಫ್ ಬೆಂಗರೆ, ದಅವಾ ಮತ್ತು ತರಬೇತಿ ಕಾರ್ಯದರ್ಶಿಯಾಗಿ ಕೆ.ಸಿ.ಸುಲೈಮಾನ್ ಅಲ್ ಫುರ್ಖಾನಿ, ಸಾಂತ್ವನ ಮತ್ತು ಇಸಾಬ ಕಾರ್ಯದರ್ಶಿಯಾಗಿ ಅಬ್ದುಲ್ ಮಜೀದ್ ಸಅದಿ, ಸಂಘಟನಾ ಕಾರ್ಯದರ್ಶಿಯಾಗಿ ಮನ್ಸೂರ್ ಬಜಾಲ್ ಹಾಗೂ 23 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಎಸ್.ವೈ.ಎಸ್. ಝೋನ್ ಕೌನ್ಸಿಲರ್ ಗಳಾಗಿ ಹಸನ್ ಪಾಂಡೇಶ್ವರ, ಸಿದ್ದೀಕ್ ಸಿ.ಸಿ., ಇಕ್ಬಾಲ್ ಅಹ್ಸನಿ, ಕೆ.ಸಿ.ಸುಲೈಮಾನ್ ಅಲ್ ಫುರ್ಖಾನಿ, ಅಬ್ದುಲ್ ಮಜೀದ್ ಸಅದಿ, ರಶೀದ್ ಐಬಿಎಂ,, ಮುಹಮ್ಮದ್ ಇಸ್ಮಾಯೀಲ್ ಬೆಂಗರೆ, ಅಬ್ದುಲ್ ಅಝೀಝ್, ಮನ್ಸೂರ್ ಬಜಾಲ್ ಆಯ್ಕೆಯಾದರು.
ಎಸ್ವೈಎಸ್ ಮಂಗಳೂರು ಸರ್ಕಲ್ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಬಜಾಲ್ ಸ್ವಾಗತಿಸಿ, ವಂದಿಸಿದರು.