ತಲಪಾಡಿ: ಹ್ಯೂಮನ್ ವೆಲ್ಫೇರ್ ಅಸೋಸಿಯೇಶನ್‌ನಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ
ಮಂಗಳೂರು : ಯುವಕರು ಸಮಾಜ ಕಟ್ಟುವಂತಹ ಸಕಾರಾತ್ಮಕ ಯೋಚನೆ ಮಾಡಬೇಕು. ಸಮಸ್ಯೆ ಹೇಳಿಕೊಂಡು ಹೋಗುವ ಅಥವಾ ಸಮಸ್ಯೆ ಸೃಷ್ಟಿಸುವ ಬದಲು ಅದನ್ನು ಬಗೆಹರಿಸುವಂತಹ ಚಾಕಚಕ್ಯತೆ ಹೊಂದಿರಬೇಕು ಎಂದು ರಾಜ್ಯ ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ತಲಪಾಡಿ ಹ್ಯೂಮನ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಸಾರ್ವಜನಿಕ ಸೇವೆಗಾಗಿ ತಲಪಾಡಿ ದಿ. ಐತಪ್ಪರೈ ವೇದಿಕೆಯಲ್ಲಿ ರವಿವಾರ ನಡೆದ ಆಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬ್ ಮೌಲಾನಾ ಯಾಹ್ಯಾ ತಂಳ್ ಅವರು ಹ್ಯೂಮನ್ ವೆಲ್ಫೇರ್ ಅಸೋಸಿಯೇಶನ್ ಉಪಾಧ್ಯಕ್ಷ ಇಬ್ರಾಹಿಂ ಟಿ.ಎಂ. ಅವರಿಗೆ ಆಂಬ್ಯುಲೆನ್ಸ್‌ನ ಕೀ ಹಸ್ತಾಂತರಿಸಿ ಮಾತನಾಡಿದರು.
ಮರಿಯಾಶ್ರಮ ಚರ್ಚ್ ಧರ್ಮಗುರು ವಂ.ಫಾ.ಸ್ಟ್ಯಾನಿ ಫೆರ್ನಾಂಡೀಸ್, ಅಬ್ರಾರ್ ಜುಮಾ ಮಸೀದಿಯ ಅಧ್ಯಕ್ಷ ಅಬ್ಬಾಸ್ ಟಿ., ಬಿಲಾಲ್ ಜುಮಾ ಮಸೀದಿಯ ಅಧ್ಯಕ್ಷ ಯಾಕೂಬ್ ಪಿ., ಪಿ.ಎ. ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕ ಡಾ.ಮೊಹಮ್ಮದ್ ಮುಬೀನ್, ಮಂಗಳೂರು ತಾಪಂ ಮಾಜಿ ಸದಸ್ಯೆ ಸುರೇಖಾ ಚಂದ್ರಹಾಸ, ವೀರಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ತಲಪಾಡಿ ಗ್ರಾಪಂ ಅಧ್ಯಕ್ಷ ಟಿ. ಇಸ್ಮಾಯಿಲ್, ಅಬ್ದುಲ್ ರಹ್ಮಾನ್, ಸದಸ್ಯ ವೈಭವ್ ಶೆಟ್ಟಿ, ಸ್ಥಾಪಕಾಧ್ಯಕ್ಷ ಇಬ್ರಾಹಿಂ, ಯುನಿವರ್ಸಲ್ ರಿಯಾದ್‌ನ ಅಬ್ದುಲ್ ಲತೀಫ್, ಡಾ.ದಿವ್ಯಾ ಶೆಟ್ಟಿ ತಲಪಾಡಿ, ತಲಪಾಡಿ ಯೂತ್ ಫಾರಂ ದುಬೈ ಘಟಕಾಧ್ಯಕ್ಷ ಅಬ್ದುಲ್ ರಹ್ಮಾನ್ ತಲಪಾಡಿ, ಟಿ.ಎ.ಟಿ. ಖಾದರ್, ಉದ್ಯಮಿ ಮೂಸಾ ತಲಪಾಡಿ, ಹ್ಯೂಮನ್ ವೆಲ್ಪೇರ್ ಅಸೋಸಿಯೇಶನ್ ಕಾರ್ಯದರ್ಶಿ ಹಮೀದ್ ಹಸನ್, ಸದಸ್ಯರಾದ ಅಸ್ಲಂ, ನಝೀರ್, ಶರೀಫ್, ಸರ್ಫ್ರಾಝ್, ಸಿದ್ದೀಕ್, ಇಲ್ಯಾಸ್, ಯೂಸುಫ್, ಅಬ್ದುಲ್ ರಹ್ಮಾನ್ ಉಪಸ್ಥಿತರಿದ್ದರು. ಖಲೀಲ್ ತಲಪಾಡಿ ವಂದಿಸಿದರು. ಸಿದ್ದೀಕ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು.