ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಶಿಕ್ಷಕರ ದಿನಾಚರಣೆ, ಗೌರವ ಸನ್ಮಾನ
ಉಳ್ಳಾಲ: ಶಿಕ್ಷಕರಾಗಿದ್ದವರು ಮಕ್ಕಳನ್ನು ಗೌರವಿಸುವ ಮನೋಭಾವ, ಪರಿಸರ ಪ್ರಜ್ಞೆ ಮೂಡಿಸುವ ಜವಾಬ್ದಾರಿ ಹೆಚ್ಚಾಗ ಬೇಕಿದೆ. ಭಾಷೆಯ ಸ್ಪರ್ಶ, ಮಾನವೀಯತೆ ಸ್ಪರ್ಶ ಎಂದಿಗೂ ಮಕ್ಕಳಲ್ಲಿ ಜಾಗೃತಿಯಾದಾಗ ಮಕ್ಕಳು ಜೀವನದಲ್ಲಿ ಬೆಳೆ ಯಲು ಸಾಧ್ಯ. ನಾವು ಯಾವ ದಾರಿಯಲ್ಲಿ ಹೋಗುತ್ತೇವೆಯೋ ಅದೇ ದಾರಿಯಲ್ಲಿ ಮಕ್ಕಳು ಹೋಗುತ್ತಾರೆ ಎಂದು ನಿಟ್ಟೆ ವಿವಿ ಮಾನವಿಕ ವಿಭಾಗದ ಮುಖ್ಯಸ್ಥ ಡಾ. ಸಾಯಿಗೀತ ಹೇಳಿದರು.
ಅವರು ಉಳ್ಳಾಲ ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ಕುತ್ತಾರ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾಜಿ ಶಾಸಕ ಜಯರಾಮ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಮತಾ ಗಟ್ಟಿ, ನಿವೃತ್ತ ಮುಖ್ಯ ಶಿಕ್ಷಕಿ ಜಾನಕಿ ಪುತ್ರನ್, ನಿವೃತ್ತ ಮುಖ್ಯ ಶಿಕ್ಷಕರಾದ ಎಂ.ಎಚ್.ಮಲಾರ್,ಎಡಲಿನ್ ಸೆರಾಲಿನ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಮತಾ ಗಟ್ಟಿ ಮಾತನಾಡಿ, ನಮ್ಮ ಗುರು ತಾಯಿ, ನಮ್ಮನ್ನು ತಿದ್ದುವವರು ಶಿಕ್ಷಕರು. ಶಿಕ್ಷಕರ ಪ್ರೇರಣೆ ಯಿಂದ ಬೆಳೆಯಲು ಸಾಧ್ಯ. ನನ್ನ ತಂದೆ ನನಗೆ ರಾಜಕೀಯ ಗುರು ಆಗಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ದೇವಕಿ ಉಳ್ಳಾಲ,ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಕೋಶಾಧಿಕಾರಿ ಆನಂದ ಕೆ ಅಸೈಗೋಳಿ , ಕೌನ್ಸಿಲರ್ ಜಬ್ಬಾರ್, ಆಲಿಯಬ್ಬ ಉಪಸ್ಥಿತರಿದ್ದರು.
ಉಳ್ಳಾಲ ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಕೆಎಂಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.