ಟೆಂಪೋ ಟ್ರಾವೆಲರ್ ಕಳವು
ಮಂಗಳೂರು, ಸೆ.16: ಬಾಡಿಗೆಗೆ ಓಡಿಸುತ್ತಿದ್ದ ನೀತಾ ಚರಣ್ ಎಂಬುವರ ಮಾಲಕತ್ವದ ಟೆಂಪೋ ಟ್ರಾವೆಲರ್ ಕಳವಾಗಿರುವ ಬಗ್ಗೆ ಅಲೆಕ್ಸ್ ಡಿಸೋಜ ಎಂಬವರು ಉರ್ವ ಠಾಣೆಗೆ ದೂರು ನೀಡಿದ್ದಾರೆ.
ಟೆೆಂಪೋ ಟ್ರಾವೆಲರನ್ನು ಸೆ.14ರಂದು ರಾತ್ರಿ 8:30ಕ್ಕೆ ಕುಂಟಿಕಾನದ ಪ್ಲೈಓವರ್ ಅಡಿಭಾಗದಲ್ಲಿ ನಿಲ್ಲಿಸಿದ್ದೆ. ಶನಿವಾರ ಮಧ್ಯಾಹ್ನ 12:30ಕ್ಕೆ ಟೆಂಪೋ ಟ್ರಾವೆಲರ್ ನಿಲ್ಲಿಸಿದ್ದ ಜಾಗಕ್ಕೆ ಬಂದಾಗ ಕಳವಾಗಿರುವುದಾಗಿ ತಿಳಿಸಿದ್ದಾರೆ. ಇದರ ಬೆಲೆ 10 ಲಕ್ಷ ರೂ. ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಉರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story