ಯೆನೆಪೋಯ ವಿವಿಯಲ್ಲಿ ಕೇಂದ್ರ ನಾಗರೀಕ ಸೇವಾ ಪರೀಕ್ಷೆಗೆ ತರಬೇತಿ ಕಾರ್ಯಾಗಾರ
ಮಂಗಳೂರು, ಅ.20: ಕೇಂದ್ರ ನಾಗರೀಕ ಸೇವಾ ಪರೀಕ್ಷೆಗೆ ತಯಾರಿ ತಂತ್ರಗಳ ಕುರಿತು ಎರಡು ದಿನಗಳ ಕಾರ್ಯಾ ಗಾರ ಯೆನೆಪೋಯ ವಿವಿಯ ಸಿವಿಲ್ ಸರ್ವಿಸ್ ಪರೀಕ್ಷಾ ಮಾರ್ಗದರ್ಶನ ಕೇಂದ್ರದ ವತಿಯಿಂದ ಯೆನೆಪೋಯ ಮೆಡಿಕಲ್ ಕಾಲೇಜಿನ ಇಎಂಡಿ ಬಿಲ್ಡಿಂಗ್ ಆಡಿಟೋರಿಯಂನಲ್ಲಿ ನಡೆಯಿತು.
ಯೆನೆಪೋಯ ಸ್ಕೂಲ್ ಆಫ್ ಅಲೈಡ್ ಸೈನ್ಸಸ್, ಆಸ್ಪತ್ರೆ ಆಡಳಿತ ಮತ್ತು ಹೆಲ್ತ್‌ಕೇರ್‌ನ ನೂರಾರು ವಿದ್ಯಾರ್ಥಿಗಳು ಕಾರ್ಯಗಾರ ದಲ್ಲಿ ಭಾಗವಹಿಸಿದ್ದರು.
ಯುಪಿಎಸ್‌ಸಿ ಸಿವಿಲ್ ಸರ್ವಿಸ್ ಪರೀಕ್ಷೆ ಮತ್ತು ಯುಪಿಎಸ್‌ಸಿ ಸಂಯೋಜಿತ ವೈದ್ಯಕೀಯ ಸೇವೆಗಳ ಪರೀಕ್ಷೆಯ ಕಡೆಗೆ ವೀಶೇಷ ಗಮನವನ್ನು ಕೇಂದ್ರೀಕರಿಸಿ ತರಬೇತಿ ನೀಡಲಾಯಿತು.
ಕಾರ್ಯಾಗಾರದಲ್ಲಿ ಯೆನೆಪೋಯ ವಿವಿ ನಾಗರಿಕ ಸೇವೆಗಳ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜಕ ಮೊಹಮ್ಮದ್ ಅಲಿ ರೂಮಿ ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡಿದರು.
ಸಂಘಟನಾ ಸಮಿತಿ ಸದಸ್ಯರಾದ ಯೆನೆಪೊಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್‌ನ ಪ್ರಾಂಶುಪಾಲ ಡಾ.ಅರುಣ್ ಎ ಭಾಗವತ್, ಪ್ರಾಧ್ಯಾಪಕರು ಮತ್ತು ಎಚ್‌ಒಡಿ ಡಾ. ಸುನಿತಾ ಸಲ್ದಾನ , ಅಸಿಸ್ಟೆಂಟ್ ಪ್ರೊಫೆಸರ್ ಕಮ್ ರೆಸ್ಪಿರೇಟರಿ ಥೆರಪಿಸ್ಟ್ ನಂದಿತಾ ಕೃಷ್ಣನ್ , ಪರ್ಫ್ಯೂಷನ್ ಟೆಕ್ನಾಲಜಿ ಟ್ಯೂಟರ್ ಉವೈಸ್ ಎಸ್ ಪಿ, ವೈದ್ಯಕೀಯ ಇಮೇಜಿಂಗ್ ತಂತ್ರಜ್ಞಾನ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಶಾಧ್ವಾನ್ ಮುಸ್ತಫಾ ಉಪಸ್ಥಿತರಿದ್ದರು.