ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ
ಮಂಗಳೂರು, ಆ.26: ನಗರದ ಬಿಜೈಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಚಿದಾನಂದ ಚಿತ್ತು (35) ಮತ್ತು ಸ್ವಾಮಿಗೌಡ (56) ಎಂಬವರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.
ಆ.25ರಂದು ಬೆಳಗ್ಗೆ 6:30ರ ವೇಳೆಗೆ ಬಿಜೈ ಸರಕಾರಿ ಬಸ್ ನಿಲ್ದಾಣದ ಮುಂದಿರುವ ಕಟ್ಟಡದ ಹೋಟೇಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಪ್ಲಾಸ್ಟೀಕ್ ಚೀಲವೊಂದರಲ್ಲಿ ಮಧ್ಯ ಪ್ಯಾಕೇಟ್ಗಳನ್ನು ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಪೊಲೀಸರು ದಾಳಿ ನಡೆಸಿದರು. ಇಬ್ಬರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ 5,760 ರೂ. ಮೌಲ್ಯದ 90 ಎಂಎಲ್ನ 128 ಸಾರಾಯಿ ಟೆಟ್ರಾ ಪ್ಯಾಕೇಟ್ಗಳು ಕಂಡು ಬಂದಿದೆ. ಅಲ್ಲದೆ ಮದ್ಯ ಮಾರಾಟ ಮಾಡಿ ಬಂದ 2,500 ರೂ.ವನ್ನು ವಶಕ್ಕೆ ಪಡೆಯಲಾಗಿದೆ.
ಘಟನೆಗೆ ಸಂಬಂಧಿಸಿ ಬಾರ್ ಮಾಲಕ ಬಾಲಕೃಷ್ಣ ಪೂಂಜಾ ಹಾಗೂ ಇಬ್ಬರು ಆರೋಪಿಗಳ ವಿರುದ್ಧ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Next Story