ಸುಳ್ಯ | ಕಂದಕಕ್ಕೆ ಬಿದ್ದ ಕಾರು; ಇಬ್ಬರಿಗೆ ಗಾಯ
ಸುಳ್ಯ: ಸುಳ್ಯ-ಆಲೆಟ್ಟಿ ರಸ್ತೆಯ ಗಾಂಧಿನಗರ ಸಮೀಪ ಗುರುಂಪು ಎಂಬಲ್ಲಿ ಕಾರೊಂದು ರಸ್ತೆ ಬದಿಯ ಕಂದಕಕ್ಕೆ ಮಗುಚಿ ಬಿದ್ದು ಇಬ್ಬರು ಪ್ರಯಾಣಿಕರು ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.
ರಸ್ತೆ ಬದಿಯ ಆಳದ ಕಂದಕಕ್ಕೆ ಕಾರು ಮಗುಚಿ ಬಿದ್ದಿಗೆ ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯದು ದಾಖಲಿಸಲಾಗಿದೆ.
ಸುಳ್ಯದಿಂದ ಕಾಸರಗೋಡು ಕಡೆ ಹೋಗುತ್ತಿದ್ದ ಕಾರಿನಲ್ಲಿ 5 ಮಂದಿ ಪ್ರಯಾಣಿಕರಲ್ಲಿ ಇಬ್ಬರಿಗೆ ಗಾಯಗಳಾಗಿದೆ. ಕಾರು ಜಖಂಗೊಂಡಿದೆ. ರಸ್ತೆಯ ಕೆಳ ಭಾಗದಲ್ಲಿ ಕಟ್ಟಡ ಹಾಗೂ ರಸ್ತೆ ಮಧ್ಯೆಯ ಕಂದಕಕ್ಕೆ ಕಾರು ನಿಯಂತ್ರಣ ತಪ್ಪಿ ಬಿದ್ದಿದೆ. ಕೆಳಭಾಗದಲ್ಲಿ ಇರುವ ಮನೆಯ ಗೋಡೆಗೂ ಹಾನಿಯಾಗಿದೆ.
Next Story