ನಾಗರಿಕರ ಅನಾನುಕೂಲತೆಗಳ ನಿವಾರಣೆಗೆ 'ಉಳ್ಳಾಲ ನಾಗರಿಕ ಸಮಿತಿ' ಅಸ್ತಿತ್ವಕ್ಕೆ
ಉಳ್ಳಾಲ ಅ 13: ಉಳ್ಳಾಲದ ಅಭಿವೃದ್ಧಿ ಮತ್ತು ನಗರ ಸಭೆ ಹಾಗೂ ಸರ್ಕಾರದ ವಿವಿಧ ಇಲಾಖೆಯಲ್ಲಿ ನಾಗರಿಕರಿಗೆ ಆಗುತ್ತಿರುವ ಅನಾನುಕೂಲತೆಗಳನ್ನು ಪ್ರಾಮಾಣಿಕವಾಗಿ ನಿವಾರಿಸುವ ಸಲುವಾಗಿ ಭಾರತದ ಪ್ರಸಿದ್ಧ ಸ್ಥಳವಾದ ಉಳ್ಳಾಲದಲ್ಲಿ ತಲೆಯೆತ್ತಿರುವ ಕುಂದು ಕೊರತೆ ಗಳನ್ನು ಪ್ರಾಮಾಣಿಕವಾಗಿ ನಿವಾರಿಸುವ ಸಲುವಾಗಿ ನೂತನವಾಗಿ "ನನ್ನ ಉಳ್ಳಾಲ ನಮ್ಮ ಉಳ್ಳಾಲ" ಎಂಬ ಧ್ಯೇಯ ವಾಕ್ಯದೊಂದಿಗೆ 'ಉಳ್ಳಾಲ ನಾಗರಿಕ ಸಮಿತಿಯನ್ನು' ಅಸ್ತಿತ್ವಕ್ಕೆ ತರಲಾಗಿದೆ.
ಶುಕ್ರವಾರ ತೊಕ್ಕೋಟಿನ ಖಾಸಗಿ ಹೋಟೆಲ್ ನ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಉಳ್ಳಾಲದ ಸಮಾನ ಮನಸ್ಕ ನಾಗರಿಕರು ವಿವಿಧ ಸಂಘ ಸಂಸ್ಥೆಯ ಮುಖಂಡರು ಮತ್ತು ರಾಜಕೀಯ ಧುರೀಣರ ನೇತೃತ್ವದಲ್ಲಿ ಪಕ್ಷಾತೀತ, ರಾಜಕೀಯ ರಹಿತವಾಗಿ ಉಳ್ಳಾಲ ನಾಗರಿಕ ಸಮಿತಿಯ ವೇದಿಕೆಯನ್ನು ರಚಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ.
ವೇದಿಕೆಯ ಸಂಚಾಲಕರಾಗಿ ಝಾಕೀರ್ ಇಖ್ಲಾಸ್ ಉಳ್ಳಾಲ್ ರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಹ ಸಂಚಾಲಕರಾಗಿ ನವೀನ್ ನಾಯಕ್ ಉಳ್ಳಾಲ ಮತ್ತು
ಸೋಶಿಯಲ್ ಫಾರೂಕ್, ಕಾರ್ಯದರ್ಶಿಯಾಗಿ ಪ್ರಶಾಂತ್ ಫೋಕಸ್ ಡ್ರೈವಿಂಗ್ ಸ್ಕೂಲ್, ಸಹಕಾರಿದರ್ಶಿಯಾಗಿ ಇಸ್ಮಾಯಿಲ್ ಉಳ್ಳಾಲ್ ಮುಸ್ಲಿಂ ಒಕ್ಕೂಟ ಆಯ್ಕೆಯಾದರು. ಸಭೆಯಲ್ಲಿ ಕೌನ್ಸಿಲರ್ ಜಬ್ಬಾರ್, ಕೌನ್ಸಿಲರ್ ಅಜ್ಗರ್ ಅಲಿ ಕೋಟೆಪುರ, ಆರ್ .ಕೆ .ಉದಯ್, ಸಾಮಾಜಿಕ ಕಾರ್ಯಕರ್ತ ಉಮರ್ ಕುಂಞ ಅಳೇಕಳಾ, ಪರಿಸರ ಪ್ರೇಮಿ ಸಾಮಾಜಿಕ ಕಾರ್ಯಕರ್ತ ಫಿರೋಜ್ ಕೋಟೆಪುರ, ಇಂತಿಯಾಜ್ ಪಿಯುಸಿಎಲ್ , ಸಮಾಜಸೇವಕ ಸಿ.ಎಚ್. ಸಲಾಂ, ಉದ್ಯಮಿಗಳಾದ ಶರೀಫ್ ಕೋಟು, ಖಾಲಿದ್ ಸಾಗರ್ ಕಲೆಕ್ಷನ್ಸ್ ಸಮಿತಿ ಸದಸ್ಯರಾಗಿ ಆಯ್ಕೆಯಾದರು.