ಉಳ್ಳಾಲ: ಸಾಮಾಜಿಕ ಸ್ವಾಸ್ಥ್ಯ ಹಾಗೂ ಸಾಮರಸ್ಯ ಅಭಿಯಾನ
ಉಳ್ಳಾಲ: ಸಮಾಜದಲ್ಲಿ ನಾವು ಹೇಗೆ ಇರಬೇಕು ಎಂಬ ವಿಚಾರ ಮುಖ್ಯ. ಸೃಷ್ಟಿಕರ್ತನ ಮುಂದೆ ವಿಧೇಯರಾಗಿ ನಾವು ಬದುಕಬೇಕು.ನಮ್ಮ ಬದುಕಿನಲ್ಲಿ ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿ ಇಟ್ಟುಕೊಂಡು ಯಾವುದೇ ಒತ್ತಡ ಗಳಿಗೆ ಬಲಿಯಾಗದೆ ಎಲ್ಲವನ್ನೂ ನಿಯಂತ್ರಿಸುವ ಮೂಲಕ ಬದುಕಬೇಕು ಎಂದು ಬಿಷಪ್ ಸಾರ್ಜಂಟ್ ಚರ್ಚ್ ನ ಸಭಾ ಪಾಲಕ ಎಡ್ವರ್ಡ್ ಕರ್ಕಡ ಹೇಳಿದರು.
ಅವರು ಸದ್ಭಾವನಾ ವೇದಿಕೆ, ಪೊಸಕುರಲ್ ಬಳಗ ಹಾಗೂ ಹಿರಾ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಹಿರಾ ಕಾಲೇಜು ಸಭಾಂಗಣದಲ್ಲಿ ನಡೆದ ಸಾಮಾಜಿಕ ಸ್ವಾಸ್ಥ್ಯ ಹಾಗೂ ಸಾಮರಸ್ಯ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರೋಗ್ಯ ಮಾಹಿತಿ ನೀಡಿದ ಕಣಚೂರು ಆರ್ಯುವೇದ ಆಸ್ಪತ್ರೆ ಸಹಾಯಕ ಉಪನ್ಯಾಸಕ ಸೌಮ್ಯ ಅಶೋಕ್ ಅವರು ಆರೋಗ್ಯ ಕಾಪಾಡುವ ಬಗ್ಗೆ ವಿವಿಧ ದಾರಿಗಳ ಬಗ್ಗೆ ಮಾಹಿತಿ ನೀಡಿದರು. ಮಸ್ಜುದುಲ್ ಹುದಾ ತೊಕ್ಕೊಟ್ಟು ಇದರ ಖತೀಬ್ ಮೊಹಮ್ಮದ್ ಕುಂಞಿ ಸಮಾಜದ ಲ್ಲಿ ನಮ್ಮ ಬದುಕು ಯಾವ ಹಾದಿಯಲ್ಲಿ ಇರಬೇಕು ಎಂಬ ಬಗ್ಗೆ ಸಂದೇಶ ನೀಡಿದರು. ಉಳ್ಳಾಲ ಎಎಸ್ಐ ಮನ್ಸೂರ್ ಮುಲ್ಕಿ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಸಮಗ್ರ ಮಾಹಿತಿ ನೀಡಿ ಮಾದಕ ವಸ್ತುಗಳ ಮುಕ್ತ ಸಮಾಜ ನಿರ್ಮಾಣ ಮಾಡುವ ಬಗೆ ಪ್ರತಿಜ್ಞೆ ಮಂಡಿಸಿದರು.
ಸದ್ಭಾವನಾ ವೇದಿಕೆ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಪೊಸಕೂರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಂತಿ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಎಎಚ್ ಮಹಮೂದ್, ಹಿರಾ ಪಿಯು ಶಿಕ್ಷಣ ಸಂಸ್ಥೆ ಸಂಚಾಲಕ ರಹ್ಮತುಲ್ಲ, ಅನ್ವರ್ ಸಾಬ್, ಹಿರಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಸಂಚಾಲಕ ಅಬ್ದುಲ್ ರಹಿಮಾನ್, ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಂ, ಸದಾನಂದ ಬಂಗೇರ,ಹಿರಾ ಪ.ಪೂ.ಪ್ರಾಂಶುಪಾಲ ಫಾತಿಮಾ ಮೆಹರೂನ್, ಪದವಿ ಕಾಲೇಜು ಪ್ರಾಂಶುಪಾಲ ಆಯೆಶಾ ಅಸ್ಮಿನ್ ಮತ್ತಿತರರು ಉಪಸ್ಥಿತರಿದ್ದರು